ವೀರೇಂದ್ರ ಸೆಹ್ವಾಗ್ ರಿಂದ ಬೇಸಿಗೆ ಶಿಬಿರದ ಉದ್ಘಾಟನೆ

373

ಕ್ರಿಕೆಟ್ ತರಬೇತಿ ಶಿಬಿರ ಬೆಂಗಳೂರು/ಮಹದೇವಪುರ:- ಇಂದಿನ ಪೀಳಿಗೆಗೆ ಕ್ರೀಡೆಯೆಂದರೆ ಕ್ರಿಕೆಟ್ ಅಷ್ಟೇ, ಹಾಗಾಗಿ ಎಲ್ಲೇಡೆ ಕ್ರಿಕೆಟ್ ದೇ ಹುಚ್ಚು, ಜ್ವರ ಇನ್ನೂ ಬೇಸಿಗೆಯೆಂದರೇ ಎಲ್ಲೇಡೆ ತರಬೇತಿ ಶಿಬಿರಗಳ ಅಬ್ಬರ, ಇಂತಹ ಕ್ರಿಕೆಟ್ ತರಬೇತಿ ಶಿಬಿರದ ಉದ್ಘಾಟನೆಗೆ ಭಾರತದ ‌ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಆಗಮಿಸಿದ್ದರು, ಬೆಂಗಳೂರು ಪೂರ್ವ ತಾಲೂಕಿನ ಹಾಲನಾಯಕನಹಳ್ಳಿಯಲ್ಲಿ ಮಾಜಿ ಕ್ರಿಕೆಟಿಗ ಜೆ.ಅರುಣ್ ಕುಮಾರ್ ರವರು ಬಿಯಾಂಡ್ ಟೆಕ್ನಿಕ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ, ಇದರ ಬೇಸಿಗೆ ಶಿಬಿರದ ಉದ್ಘಾಟನೆಯನ್ನು ಸೆಹ್ವಾಗ್ ದೀಪ ಬೆಳಗುವ ಮೂಲಕ ನೇರವೇರಿಸಿದರು, ವಿದ್ಯಾರ್ಥಿಗಳಿಗಾಗೀ ವಿಶೇಷವಾದ ಎಂಟು ಗ್ಯಾಲರಿಗಳಿಗೆ ಚಾಲನೆ ನೀಡಿದರು, ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು, ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಕಠಿಣ ಪರಿಶ್ರಮದಿಂದ ಯಾವುದೇ ಸಾಧನೆ ಮಾಡಬಹುದುದೆಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು, ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಸೆಹ್ವಾಗ್ ಇಂದಿನ ಪೀಳಿಗೆಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ ಇವುಗಳನ್ನು ಸರಿಯಾಗಿ ಬಳಸಿಕೊಂಡು ಹೆಚ್ಚು ವೃತ್ತಿಪರತೆ ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು, ಇವರೊಂದಿಗೆ ಡೆಲ್ಲಿಯ ರಣಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಹಾಗೂ ಪೋಷಕರು ಹಾಗೂ ಅಕಾಡೆಮಿಯ ಸ್ಥಾಪಕ ಜೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.