ಮತ್ತೊಮ್ಮೆ ಅಧಿಕಾರಕ್ಕಾಗಿ ಕಾಂಗ್ರೇಸ್ ಕಾರ್ಯಕರ್ತರ ಕಸರತ್ತು

338

ಬಳ್ಳಾರಿ /ಹೊಸಪೇಟೆ: ಕಾಂಗ್ರೇಸ್ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ವೈ. ಸೈಯದ್ ಅಹಮ್ಮದ್ ಕರೆ ನೀಡಿದರು.

ಬಳ್ಳಾರಿ ಜಿಲ್ಲಾ ಕಾಂಗ್ರೇಸ್ ಗ್ರಾಮೀಣ ಅಲ್ಪ ಸಂಖ್ಯಾತರ ವಿಭಾಗದ ವತಿಯಿಂದ ನಗರದ ಉಮರ್ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಒಗ್ಗೂಡಿ, ಕಾಂಗ್ರೇಸ್ ಸರಕಾರದ ವಿವಿಧ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಬೇಕು. ಮುಂದಿನ ಬಾರಿ ಈ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಕೋಮುವಾದಿ ಪಕ್ಷಗಳನ್ನು ದೂರ ಇಡಬೇಕೆಂದು ಕರೆ ನೀಡಿದರು.

ಮಾಜಿ ಸಚಿವರಾದ ಎಮ್.ಎನ್.ನಬೀಸಾಬ್ ಮಾತನಾಡಿ, ರಾಜ್ಯದಲ್ಲಿ ಉಚಿತವಾಗಿ ಬಡ ಜನರಿಗೆ ಅಕ್ಕಿಯನ್ನು ನೀಡುವ ಮೂಲಕ ಬಡವರ ಹಸಿವನ್ನು ನೀಗಿಸಿದ ಕಾಂಗ್ರೇಸ್ ಸರಕಾರಕ್ಕೆ ಋಣ ತೀರಿಸಲು ಅಲ್ಪ ಸಂಖ್ಯಾತ ಸಮುದಾಯಗಳು ಒಗ್ಗಟ್ಟಾಗಿ ಕಾಂಗ್ರೇಸ್‌ಗೆ ಬೆಂಬಲಿಸಬೇಕು ಎಂದು ಕಿವಿ ಮಾತು ಹೇಳಿದರು.

ಕಾಂಗ್ರೇಸ್ ಮುಂಖಡರಾದ ಎಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೇವಲ 2 ಕ್ಷೇತ್ರಗಳು ಮಾತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ 90-ವಿಜಯನಗರ ಕ್ಷೇತ್ರದಲ್ಲಿ ಅಧಿಕ ಅಲ್ಪಸಂಖ್ಯಾತರ ಮತಗಳು ಇದ್ದು, ಈ ಕ್ಷೇತ್ರದಲ್ಲಿ ಜನಾಭಿಪ್ರಾಯ ಪಡೆದು ಕಡ್ಡಾಯವಾಗಿ ಕಾಂಗ್ರೇಸ್ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನಯ ಆಯ್ಕೆ ಮಾಡಬೇಕು. ಈ ಮೂಲಕ ವಿಜಯ ನಗರ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕೆಂದು ಕೋರಿದರು.

ಕಾಂಗ್ರೆಸ್ ಮುಖಂಡ ದೀಪಕ್ ಕುಮಾರ್ ಸಿಂಗ್, ಜಿಲ್ಲಾ ಪಂಚಾಯತಿ ಸದಸ್ಯರಾದ ಪ್ರವೀಣ್ ಸಿಂಗ್, ಮುಂಖಡರಾದ ಅಬ್ದುಲ್ ಮಹಾಬ್,ವಾಡಾ ಅಧ್ಯಕ್ಷ ರೋಶನ್ ಜಮೀರ್, ಬಳ್ಳಾರಿ ಜಿಲ್ಲಾ ವಕ್ಫ್ ಅಧ್ಯಕ್ಷ ರಿಜ್ವಾನ್,ಜಿಲ್ಲಾ ಮುಂಖಡ ಅಯಾಜ್ ,  ಜಿಲ್ಲಾ ಕಾಂಗ್ರೇಸ್ ಗ್ರಾಮೀಣ ಅಲ್ಪ ಸಂಖ್ಯಾತರ ಅಧ್ಯಕ್ಷ ಫೈಯಮ್ ಬಾಷಾ, ಮುಂಖಡರಾದ ಎಲ್.ಸಿದ್ದನಗೌಡ, ಶಾದಬ್ ವಹಾಬ್, ಬಿ.ಕಾಂ..ಮಾಬುಸಾಬ್, ಕನ್ನಡ ನಜೀರ್, ತಾರಳ್ಳಿ ವೆಂಕಟೇಶ್, ವೆಂಕಟರಮಣ , ಶಿವಮೂರ್ತಿ, ಬಡಾವಲಿ, ಖಾದರ್ ರಫಾಯಿ, ಆಡಿಟರ್ ಮಹಮ್ಮದ್, ಗೌಸ್, ಇಂತಿಯಾಜ್ , ಸೈಯದ್ ಅಬ್ದುಲ್ ವಾಹಿದ್, ಜಾಕೀರ್, ಬಾಷ, ಅಬ್ದುಲ್ ರವೂಫ್, ಎನ್.ಎಸ್.ರಫೀಕ್, ಬಾಷ , ನಾಸಿರ್, ತಾಲೂಕು ಕಾಂಗ್ರೇಸ್ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಎಮ್.ಡಿ.ರಫೀಕ್ ಇತರರು ಇದ್ದರು.