ಬಲಿಗಾಗಿ ಕಾಯುತ್ತಿದೆ ತೆರೆದ ಬಾವಿ

365

 

ಚಿಕ್ಕಬಳ್ಳಾಪುರ/  ಶಿಡ್ಲಘಟ್ಟ : ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲಸೂರು ದಿನ್ನೆ ಗ್ರಾಮದಲ್ಲಿ ಹಳೆಯ ಕಾಲದ ಬೃಹದಾಕಾರದ ತೆರೆದ ಬಾವಿಯೊಂದು ಪಾಳು ಬಿದ್ದಿದೆ. ಸಾರ್ವಜನಿಕರು ಓಡಾಡೋ ರಸ್ತೆಯಲ್ಲಿಯೇ ಊರಿನ ಹೃದಯ ಭಾಗದಲ್ಲಿ ಈ ಬಾವಿ ಇದ್ದು, ಯಾರು ಯಾವಾಗ ಬೇಕಾದ್ರೂ ಇದರಲ್ಲಿ ಬೀಳೋ ಸಂಭವವಿದೆ. ಅಷ್ಟೇ ಅಲ್ಲ, ಇದರ ಸುತ್ತಮುತ್ತಲೂ ಜನವಸತಿ ಇದ್ದು, ಮಕ್ಕಳು ಈ ಭಾವಿಯ ಪಕ್ಕದಲ್ಲಿ ಆಟವಾಡುತ್ತಿರುತ್ತಾರೆ ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದರೆ ಗತಿಯೇನು?

ಈಗಾಗಲೇ ಈ ತೆರೆದ ಬಾವಿಯಲ್ಲಿ ಕುರಿ, ಮೇಕೆ, ನಾಯಿ, ಕೋಳಿ, ಇತರೆ ಪ್ರಾಣಿ ಪಕ್ಷಿಗಳು ಬಾವಿಯಲ್ಲಿ ಬಿದ್ದಿದ್ದು , ಗ್ರಾಮಸ್ಥರು ಇತರೆ ಉಪಕರಣಗಳ ಸಹಾಯದಿಂದ ರಕ್ಷಣೆ ಮಾಡಿ ಅವುಗಳ ಪ್ರಾಣವನ್ನು ಉಳಿಸಿದ್ದಿರಿ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ಕೊಳವೆ ಬಾವಿಗಳಲ್ಲಿ ಬಿದ್ದೇ ಜನ ಸಾವನ್ನಪ್ಪುವಾಗ, ಇನ್ನು ತೆರೆದ ಬಾವಿಗಳಲ್ಲಿ ಬಿದ್ದು ಜನರಿಗೆ ಅಪಾಯವಾಗೊಲ್ಲ ಎನ್ನೋದಕ್ಕೆ ಗ್ಯಾರೆಂಟಿಯೇನು ಅಂತ ಪ್ರಶ್ನಿಸ್ತಿದ್ದಾರೆ, ಇಲ್ಲಿನ ಸ್ಥಳೀಯರು.

ಪದೇ ಪದೇ ಕೊಳವೆ ಬಾವಿಗಳಿಂದ ಅನಾಹುತಗಳಾಗ್ತಿದ್ದು, ಅವನ್ನು ತಪ್ಪಿಸೋಕೆ ರಾಜ್ಯ ಸರ್ಕಾರದಿಂದ ಆಗ್ತಿಲ್ಲ. ಇನ್ನು ತೆರೆದ ಬಾವಿಗಳಿಂದ ಅನಾಹುತಗಳಾಗೋದನ್ನು ತಪ್ಪಿಸೋಕಾಗುತ್ತೇನು ಅಂತ ಅಲಸೂರು ದಿನ್ನೆ ಗ್ರಾಮಸ್ಥರು ಕೇಳುತ್ತಿದ್ದಾರೆ.

ಅಲ್ಲದೆ ಜಿಲ್ಲೆಯಲ್ಲಿ ನಿರುಪಯುಕ್ತ ಕೊಳವೆ ಬಾವಿಗಳ ಜೊತೆ ತೆರೆದ ಬಾವಿಗಳನ್ನು ಮುಚ್ಚಬೇಕು ಇದರ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.