ಮಾನಸಿಕ ಅಸ್ವಸ್ಥ ಪತಿಯಿಂದ ಪತ್ನಿ ಕೊಲೆ

236

ರಾಯಚೂರು: ಮಾನಸಿಕ ಅಸ್ವಸ್ಥ ಪತಿಯಿಂದ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ. ನಗರದ ಗದ್ವಾಲ್ ರಸ್ತೆಯಲ್ಲಿರುವ ಮಂ ಡಿಪೇಟೆಯ ಕಾಕನಕೆರೆಯ ಹತ್ತಿರ ಘಟನೆ ಸಂಭವಿಸಿದ್ದು ಕೊಲೆಯಾದ ಪತ್ನಿ ಈರಮ್ಮ (25)ಎಂದು ಗುರುತಿಸಲಾಗಿದೆ.

ಮನೆಯ ಬಾಗಿಲು ಚಿಲಕ ಹಾಕಿಕೊಂಡು ಮಲಗಿದ ಸಂದರ್ಭದಲ್ಲಿ ಏಕಾಎಕಿಯಾಗಿ ಅಸ್ವಸ್ಥ ಪತಿ ವೆಂಕಟೇಶ ತನ್ನ ಹೆಂಡತಿಯ ಮೇಲೆ ಚಾಕುವಿನಿಂದ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕಳೆದ 5 ವರ್ಷದ ಹಿಂದೆ ವೆಂಕಟೇಶನ ಜೊತೆ  ಮದುವೆಯಾಗಿದ್ದು ಕುಟುಂಬ ಜೀವನದಲ್ಲಿ ಯಾವುದೇ ಕಲಹಕ್ಕೆ ಆಸ್ಪದವಿರುವುದಿಲ್ಲ ಎಮದು ಸಂಭದಿಕರು ಹೇಳುತ್ತಿದ್ದು,ಕೊಲೆಯ ಕುರಿತು ಯಾವುದೇ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಈರಮ್ಮನ ತಂದೆ ವೆಂಕಟಪ್ಪ ಈ ಕುರಿತು ಮಾರ್ಕೆಟ್ ಯಾರ್ಡ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.