ಪ್ರತಿಭಟನಾ ತಯಾರಿ ಸುದ್ದಿಗೋಷ್ಟಿ

210

ಮಂಡ್ಯ/ಮಳವಳ್ಳಿ: ರಾಜ್ಯ ಸಕಾ೯ರ ಬಿಪಿಎಲ್ ಕಾಡ್೯ದಾರರಿಗೆ 2 ಕೆಜಿ ಹೆಚ್ಚುವರಿ ಅಕ್ಕಿ ನೀಡಿ ಪಡಿತರದಾರರಿಗೆ ನೀಡುತ್ತಿದ್ದ ಇನ್ನಿತರೆ ಪದಾರ್ಥಗಳ ನ್ನು ಕಸಿದುಕೊಂಡು ಸಂಕಷ್ಟಕ್ಕೆ ಸಿಲುಕಿಸಿದ ಸಕಾ೯ರ ದ ವಿರುದ್ದ ಹಾಗೂ ತಾಲ್ಲೂಕು ಆಡಳಿತ ವಿರುದ್ದ ವಿವಿದ ಬೇಡಿಕೆಗಳನ್ನು ಒತ್ತಾಯಿಸಿ ಮೇ 12 ರಂದು ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕನಾ೯ಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ .ಪುಟ್ಟುಮಾದು ತಿಳಿಸಿದರು. ‌‌‌‌ ‌ ಮಳವಳ್ಳಿ ಪಟ್ಟಣದ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ. ಜಾನುವಾರುಗಳಿಗೆ ಮೇವು ತಂದು ಶೇಖರಣೆ ಮಾಡಿದ್ದರೂ ಇನ್ನೂ ವಿತರಣೆ ಮಾಡದೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಗೋಷ್ಟಿ ಯಲ್ಲಿ ತಾಲ್ಲೂಕು ಅಧ್ಯಕ್ಷ ಕೆಂಪರಾಜು ಸೇರಿದಂತೆ ಮತ್ತಿತ್ತರರು ಇದ್ದರು