ಮಳೆಗಾಗಿ “ಮಹಾರುದ್ರ ಹೋಮ” ಅಗಸಿ ಬಾಗಿಲು ಪೂಜೆ

263

ಬಳ್ಳಾರಿ / ಹೊಸಪೇಟೆ : ಸತತ ಬರಗಾಲದಿಂದ ಕಂಗೆಟ್ಟಿರುವ ಕಮಲಾಪುರ ರೈತರು ಪೂರ್ವಜರ ನಂಬಿಕೆಯಂತೆ, ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿದ್ದ ನಲ್ಲಾಪುರ ಗ್ರಾಮದ ಬಳಿಯಿರುವ ಕಮಲಾಪುರದ ಐತಿಹಾಸಿಕ ಅಗಸಿ ಬಾಗಿಲು ಬಳಿಯ ಬುಡ್ಡೇ ಕಲ್ಲಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ವರ್ಷಗಳ ಹಿಂದೆ ಲಾರಿಯೊಂದರ ಅಪಘಾತ ಕಾರಣದಿಂದ, ಈ ಪುರಾತನ ಅಗಸಿ ಬಾಗಿಲು ಬಹುತೇಕ ಬಿದ್ದುಹೋಗಿ, ಅದರ ಅವಶೇಷಗಳು ರಸ್ತೆ ಪಕ್ಕದಲ್ಲಿ ಬಿದ್ದಿವೆ. ಈ ಅಗಸಿ ಬಾಗಿಲು ಧ್ವಂಸಗೊಂಡ ಕಾರಣದಿಂದಲೇ ಊರಿಗೆ ಕಾಲಕಾಲಕ್ಕೆ ಮಳೆಯಾಗದೇ ಸುಭಿಕ್ಷೆ ದೂರವಾಗಿ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದೇವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಊರಿನ ಕೆಲವು ಹಿರಿಯರ ಅಭಿಪ್ರಾಯದಂತೆ ಇಂದು ಗಂಡುಗಲಿ ಕುಮಾರರಾಮ ಯುವಸೇನೆ ಯ ಯುವಕರು ಸಾಂಕೇತಿಕವಾಗಿ ಅಗಸಿ ಬಾಗಿಲು ಮರು ಸ್ಥಾಪನೆ ಮಾಡಿ, ಬಾಗಿಲುನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಿ, ವಿದ್ಯುಕ್ತವಾಗ ಅಗಸಿಯ ಬುಡ್ಡೆಕಲ್ಲಿಗೆ ಪೂಜೆ ಸಲ್ಲಿಸಿದರು. ನಂತರದಲ್ಲಿ, ಮಳೆಗಾಗಿ ವರುಣ ದೇವನನ್ನು ಸಂತುಷ್ಟಗೊಳಿಸಲು

“ಮಹಾರುದ್ರ ಹೋಮ” ವನ್ನು ಜರುಗಿಸಲಾಯಿತು. ಇದೇ ಸಂದರ್ಭದಲ್ಲಿ,, ಮಳೆಗಾಗಿ ಅರಣ್ಯ ಉಳಿಸುವ ಬೆಳೆಸುವ ಪ್ರಜ್ಞೆ ಮೂಡಿಸಲು ಅಗಸಿ ಬಾಗಿಲು ಬಳಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ ಮುಖಂಡ ಶಿವಕುಮಾರ ಮಾಳಗಿ ರಾಜ್ಯ ಪುರಾತತ್ವ ಇಲಾಖೆಯು ಐತಿಹಾಸಿಕ ಅಗಸಿ ಬಾಗಿಲನ್ನು ಪುನರುಜ್ಜೀವನ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಇಲಾಖೆಯ ಅಧಿಕಾರಿ ಮಂಜ್ಯಾನಾಯ್ಕ್ ತಮ್ಮ ಇಲಾಖೆಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಮಲಾಪುರ ಕಂದಾಯ ನಿರೀಕ್ಷಕ ಅನಿಲ್ ಕುಮಾರ ಗ್ರಾಮಲೆಕ್ಕಾಧಿಕಾರಿ ರವಿಚಂದ್ರ ಗೊಗ್ಗಿ, ಉಪ ವಲಯ ಅರಣ್ಯಾಧಿಕಾರಿ ದೇವರಾಜ್, ಗಂಡುಗಲಿ ಕುಮಾರರಾಮ ಯುವಸೇನೆ ಯ ಭರಮಪ್ಪ ನಾಯಕ, ಮುಸ್ತಪ್ಪ ನಾಯಕ, ಪ್ರಸಾದ್ ನಾಯಕ, ಷಣ್ಮುಖ ಗರಡಿ, ರೈತ ಮುಖಂಡ ಮೈಲಾರ ಮೂರ್ತಿ, ಸಂಡೂರಪ್ಪ, ಕಮ್ಮಾರ ಅಂಬಣ್ಣ, ಹಿರೇಕೆರಿ ಗಂಗಪ್ಪ, ಮನ್ಮಮಥಕೇರಿ ಹನುಮಂತಪ್ಪ, ದುರ್ಗಪ್ಪ, ಚಂದ್ರಶೇಖರಪ್ಪ, ವಿರೇಶ ಇತರರು ಇದ್ದರು