ಕೋತಿಗಳ ಮಾರಣಹೋಮ

321

ರಾಯಚೂರು: ನೀರು ಕುಡಿಯಲು ಹೋಗಿದ್ದ ಕೋತಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ತಾಲೂಕಿನ ಗಧಾರ್ ಗ್ರಾಮದಲ್ಲಿ ಘಟನೆ ಸಂಬವಿಸಿದ್ದು ಕುಡಿಯುವ ನೀರಿನ ಟ್ಯಾಂಕರ್ ಮೇಲೆ ಹತ್ತಿ ನೀರು ಕುಡಿಯಲು ಕೋತಿಗಳು ಟ್ಯಾಂಕ್ ರ್ ಗಿಳಿದಿವೆ ಮೇಲೆ ಹತ್ತಿಬರಲಾಗದೆ ಸುಮಾರು 16 ಕೋತಿಗಳು ಸಾವನಪ್ಪಿವೆ.ಟ್ಯಾಂಕರ್ ನ ಮುಚ್ಚಲ ಬಾಗಿಲು ಇಲ್ಲದೇ ಇರುವುದರಿಂದ ಈ ಘಟನೆಗೆ ಕಾರಣವಾಗಿದೆ.

ಗ್ರಾಮಸ್ಥರು ಕೋತಿಗಳನ್ನು ಟ್ಯಾಂಕ್‌ನಿಂದ ಹೊರ ತೆಗೆದು ಕೋತಿಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.
ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.