ಸೃಷ್ಟಿ ಕಲಾಬಳಗದಿಂದ ನಾಟಕಪ್ರದರ್ಶನ

254

ಬಳ್ಳಾರಿ /ಹೊಸಪೇಟೆ : ಮರಿಯಮ್ಮನಹಳ್ಳಿಯ ದುರ್ಗಾದಾಸ ರಂಗಮಂದಿರ ದಲ್ಲಿ ಬುಧವಾರ ಸೃಷ್ಟಿ ಕಲಾಬಳಗವು , ಧಾರವಾಡದ ಆಟಮಾಟ ತಂಡದ ಕಲಾವಿದರ ಬಾರಿಗಿಡ ನಾಟಕಪ್ರದರ್ಶನವನ್ನು ಆಯೊಜಿಸಿತ್ತು . ನಾಟಕ ವನ್ನು ಚಿದಾನಂದ ಸಾಲಿ ರಚಿಸಿದ್ದು , ಈ ನಾಟಕ ದ ಪರಿಕಲ್ಪನೆ ಮತ್ತು ನಿರ್ದೇಶನ ಮಹಾದೇವ ಹಡಪದ ಅವರದಾಗಿತ್ತು . ಶಿಲ್ಪಾ ಎಸ್ , ಜಗದೀಶನೆಗಳೂರು , ಗಿರಿಜಾಹಿರೆಮಠ , ರೊಹಿತ್ ಹೆಗಡೆ ,ರವಿ ಕ್ಯಾತನಳ್ಳಿ , ವಿಕ್ರಮಕೊಪ್ಪ , ಮಂಜುನಾಥ ಬಾಗಳಿ , ತಿಲಕರಾಜ ಟಿ.ಎಸ್ , ನವ್ಯ ಕಡಮೆ ನಾಟಕ ದಲ್ಲಿ ಮನೋಜ್ಞ ವಾಗಿ ಅಭಿನಯಿಸಿ ನೋಡುಗರ ಮನಗೆದ್ದರು ,ನಾಟಕಕ್ಕೆ ಎಸ್ . ಪಿ ಸಂಗೀತ ಒದಗಿಸಿದದರು , ಕಾರ್ಪೊರೇಟ್ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಸಂಸಾರಗಳಲ್ಲಿ ಉಂಟಾಗುವ ತುಮುಲಗಳ ಮುಖವಾಡಗಳನ್ನು ಕಲಾವಿದರು ಅಚ್ಚು ಕಟ್ಟಾಗಿ ಅನಾವರಣಗೊಳಿಸಿದರು .ಈ ಸಂದರ್ಭದಲ್ಲಿ ಕಲವಿದರಾದ ಬಿ ಎಂ . ಎಸ್ .ಪ್ರಭು , ಡಾ . ಕೆ ‌.ನಾಗರತ್ನಮ್ಮ . ಉಪನ್ಯಾಸ ಕ ಸೊಮೇಶ ಉಪ್ಪಾರ್ , ಸಿ . ಪ್ರಕಾಶ , ಜಿ .ವಿ . ಸುಬ್ಬರಾವ್ , ಬಿ . ಶಿವಕುಮಾರ , ಮಹಾಂತೇಶ , ಇತರರಿದ್ದರು .