ಉಳಾಗಡ್ಡೆ ಸಂಗ್ರಹ ಗುಡಿಸಿಲಿಗೆ ಬೆಂಕಿ

304

ಬಳ್ಳಾರಿ /ಹೊಸಪೇಟೆ: ಸಿಡಿಲು ಬಡಿದ ಪರಿಣಾಮವಾಗಿ ಉಳಾಗಡ್ಡೆ ಸಂಗ್ರಹಿಸಿ ಇಡುವ ಗುಡಿಸಿಲಿಗೆ ಬೆಂಕಿ ತಗುಲಿ, ಲಕ್ಷಾಂತರ ರೂ. ಉಳಗಾಡ್ಡಿ ಬೆಂಕಿಗೆ ಆಹುತಿಯಾದ ಘಟನೆ ತಾಲ್ಲೂಕಿನ ಗುಂಡ್ಲವದ್ದಿಗೇರಿ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.

ತಾಲ್ಲೂಕಿನ ಕಮಲಾಪುರ ಹೋಬಳಿ ಗುಂಡ್ಲವದ್ಧಿಗೇರಿ ಗ್ರಾಮದ ಕೇಶವಮೂರ್ತಿ ಎನ್ನುವ ರೈತನ ಹೊಲದಲ್ಲಿ ಈ ಘಟನೆ ನಡೆದಿದ್ದು, ಸುಮಾರು, 2ಲಕ್ಷ ರೂ. ಮೌಲ್ಯದ ಉಳಾಗಡ್ಡಿ ಸುಟ್ಟು ಕರಲಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ದೌಡಿಸಿ ಬಂದ ಅಗ್ನಿಶಾಮಕ ಸಿಬ್ಬಂದಿಗಳು, ಬೆಂಕಿ ನಂದಿಸಿದರು. ಕಂದಾಯ ಇಲಾಖೆ ಸಿಬ್ಬಂದಿಗಳು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿದರು. ಮಳೆಯಿಲ್ಲದೇ ತೀವ್ರ ಸಂಕಷ್ಟಗೀಡಾಗಿರುವ ಸಂತ್ರಸ್ಥ ರೈತನಿಗೆ ಘಟನೆ ಅಘಾತವನ್ನು ಉಂಟು ಮಾಡಿದೆ.