ನಾಗಲಕೆರೆ ಪ್ರದೇಶದಲ್ಲಿ ಗುಡ್ಡದ ಕಲ್ಲೊಂದು ಜಾರಿ ಬಿದ್ದು ಓರ್ವ ಬಾಲಕ ಸಾವು

432

ಬಳ್ಳಾರಿ: ನಾಗಲಕೆರೆ ಪ್ರದೇಶದಲ್ಲಿ ಗುಡ್ಡದ ಕಲ್ಲೊಂದು ಜಾರಿ ಬಿದ್ದು ಓರ್ವ ಬಾಲಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ರಾತ್ರಿ ಎರಡು ಗಂಟೆಯ ಸುಮಾರಿಗೆ ಸುರಿದ ಭಾರೀ ಗಾಳಿ ಸಮೇತ ಮಳೆಗೆ ಶಿವ ಎಂಬ ಹನ್ನೆರಡು ವರ್ಷದ ಬಾಲಕ ಮೃತಪಟ್ಟರೆ, ಬಸಪ್ಪ, ಎಲ್ಲಮ್ಮ ಎಂಬ ವೃದ್ಧರ ಕಾಲುಗಳು ಮುರಿದಿವೆ. ಕೀರ್ತಿ ಮತ್ತು ಯಶೋದ ಎಂಬ ಮಕ್ಕಳೂ ಸಹ ಗಂಭೀರ ಸ್ವರೂಪದ ಗಾಯಗಳಾಗಿವೆ.ರಾತ್ರಿಯ ಹೊತ್ತು ಕುಡಿಯುವ ನೀರು ಬಿಟ್ಟಿರುವುದರಿಂದ ಸದರಿ ಪ್ರದೇಶದ ಜನರು ನಿದ್ರೆಯಲ್ಲಿರಲಿಲ್ಲ. ಭೀಮ ಮತ್ತು ಈಶ್ವರಮ್ಮ ಅವರ ಪುತ್ರ ಶಿವ ಈ ಘಟನೆಯಿಂದ ಅಸು ನೀಗಿದ್ದು, ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ವೆಂಕಟರಮಣ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.ಘಟನೆಯ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.