CPI(M)ನ ಮಹಾ ಕಾಲ್ನಡಿಗೆ ಜಾಥಾ.

297

CPI(M)ನ ಮಹಾ ಕಾಲ್ನಡಿಗೆ ಜಾಥಾ.
ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ ಐಬಿ ಯಿಂದ ಹೋರಟ ಮೆರವಣಿಗೆ ಪ್ರಮುಖ ರಸ್ತೆ ಯಿಂದ ಆಜಾದ್ ಚೌಕ್ ವರೆಗೂ ಕಾಲ್ನಡಿಗೆ ಜಾಥಾಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ CPI(M)ಪೊಲಿಟ್ ಬ್ಯೂರೋ ಸದಸ್ಯರು ಕಾಂ”ಬಿ.ವಿ ರಾಘವುಲು .

ಚಿಕ್ಕಬಳ್ಳಾಪುರ ಜಿಲ್ಲೆಯು ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದೆ ಕೇವಲ ಮಳೆ ನೀರನ್ನು ಆಸರೆಯಾಗಿ ಜೀವನಮಾಡುವ ಶಾಶ್ವತವಾದ ಬರದ ಜಿಲ್ಲೆಯಾಗಿದೆ. ಆದರೆ ಕಳೆದ ನಾಲ್ಕು ವರ್ಷ ಗಳಿಂದ ಮಳೆಯಿಲ್ಲದೆ ಭೀಕರ ಬರಗಾಲಕ್ಕೆ ಜಿಲ್ಲೆಯ ಜನತೆ ತುತ್ತಾಗಿದ್ದಾರೆ ಸುಮಾರು 40-50 ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲ ಇಡೀ ಜಿಲ್ಲೆಯನ್ನು ಆವರಿಸಿದೆ.
ದೇಶದಲ್ಲಿ ಪ್ರತಿ ದಿನ 50 ರೈತರು ಆತ್ಮಹತ್ಯೆಗಳು ನಡೆಯುತ್ತಿದೆ.
ಅನ್ನದಾತ ಆತ್ಮಹತ್ಯೆಗಳಿಗೆ ಗುರಿಯಾಗುತ್ತಿದಾರೆ,ಈ ಹಿನ್ನಲೆ ಯಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಬೇಕಾಗಿದೆ.ಶ್ರೀಮಂತರು ಬಡವರೆನ್ನುವ ತಾರತಮ್ಯ ಇಲ್ಲದೆ.ಎಲ್ಲಾ ಕುಟುಂಬಗಳಿಗೆ ಕನಿಷ್ಠ 35 ಕೆ.ಜಿ ಪಡಿತರ ಧಾನ್ಯವನ್ನು ನೀಡಬೇಕು. ಕೆಲಸ ಕೇಳಿದ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಟ್ಟು ಪ್ರತಿವಾರ ತಪ್ಪದೆ ಕೂಲಿ ಪಾವತಿ ಮಾಡಬೇಕು.ಜನ ಮತ್ತು ಜಾನುವಾರಗಳಿಗೆ ತುರ್ತಾಗಿ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಮತ್ತು ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಮೇವನ್ನು ಸರಬರಾಜು ಮಾಡಬೇಕು ಎಂದರು. ಜಿಲ್ಲೆಯ ಜಿಲ್ಲಾಡಳಿತವು ಬರಪರಿಸ್ಥಿತಿಯನ್ನು ನಿಬಾಯಿಸುವಲ್ಲಿ ವಿಫಲವಾಗುತ್ತಿದೆ.
CPI(M)ಪಕ್ಷವು ಚಿಕ್ಕಬಳ್ಳಾಪುರ ಜಿಲ್ಲಾದ್ಯಾಂತ 18 ದಿನಗಳ ಕಾಕ “ದುಡಿಯುವ ಜನರ ಮಹಾ ಕಾಲ್ನಡಿಗೆ ಜಾಥಾ” ಮೂಲಕ ರೈತರ ಕೃಷಿ ಕಾರ್ಮಿಕರ ಹಾಗೂ ಸಾಮಾನ್ಯ ಜನರನ್ನು ಬೇಟಿ ಮಾಡಿ ಅವರನ್ನು ಜಾಗೃತಿಗೊಳಿಸಿ ಸರ್ಕಾರಗಳ ಟೂಳ್ಳುತನವನ್ನು ವಿವರಿಸಿ ಪಕ್ಷತಿತವಾಗಿ ಸಾವಿರಾರು ಜನರೊಂದಿಗೆ ಜಿಲ್ಲಾಡಳಿತ ಕಛೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದಾರೆ.
ಈ ಸಂದರ್ಭದಲ್ಲಿ CPI(M) ಮಾಜಿ ಶಾಸಕರು ಬಾಗೇಪಲ್ಲಿ ಶ್ರೀನಿವಾಸ ರೆಡ್ಡಿ, ಗೋಪಿನಾಥ್,ಡಾ ಅನಿಲ್ ಕುಮಾರ್,ವೆಂಕಟರವಣಪ್ಪ, ಸಾದಿಕ್ ಪಾಷ, ಕೃಷ್ಣ ರೆಡ್ಡಿ ಉಪಸ್ಥಿತರಿದ್ದರು.