ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ರೈತರ ಸಾಲ ಮನ್ನಾ -ಹೆಚ್ಡಿಕೆ

271

ರಾಯಚೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದವರು ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಸ್ಪರ್ದೇಮಾಡಲಿದೆ. ರಾಜ್ಯದಲ್ಲಿ 4ವರ್ಷದ ಅವಧಿಯಲ್ಲಿ ಜನರ ತೆರಿಗೆ ಹಣ ದುರ್ಬಳಕೆಯಾಗಿದದು, ರೈತರ ಸಾಲ ಮನ್ನಾ ಮಾಡುತ್ತಿಲ್ಲ, ಕೃಷ್ಣಾ ಎ.ಸ್ಕಿಂನಲ್ಲಿ ಶೇ.70ರಷ್ಟು ನೀರು ಉಪಯೋಗವಾಗಬೇಕು. ನೀರಿನ ಸಮಸ್ಯೆ ಇದ್ದು ರಾಜ್ಯದಲ್ಲಿ ಬಳಕೆಯಾಗಬೇಕು, ಬೇರೆ ರಾಜ್ಯಕ್ಕೆ ನೀರು ಹರಿದು ಹೋಗಬಾರದು ಇದು ನಮ್ಮ ಪಕ್ಷದ ನಿಲುವಾಗಿದೆ ಎಂದರು. ಜಿಲ್ಲೆಯಲ್ಲಿ ಪೌಂಷ್ಠಿಕಾಂಶದ ಆಹಾರದ ಕೊರತೆಯಿಂದ ಗರ್ಭೀಣಿ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.
ಹೆಚ್.ವಿಶ್ವನಾಥ ಪಕ್ಷಕ್ಕೆ ಸೇರ್ಪಡೆಗೆ ತಿರ್ಮಾನಮಾಡಿದ್ದು ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವುದಾಗಿ ಹೇಳಿದರು. ಅವರು ಸನ್ಯಾಸಿಯಲ್ಲ, ರಾಜಕೀಯದಲ್ಲಿ ಇನ್ನೂ ಸೇವೆ ಸಲ್ಲಿಸುವ ಆಸೆಯಿದ್ದು ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವುದಾಗಿ ಹೇಳಿದರು. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ದೇಶವೆ ಹೇಳುತ್ತಿರುವಾಗ, ವಿಶ್ವನಾಥ ಅವರು ಯಾವುದೇ ವ್ಯಯಕ್ತಿಕವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂಧರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಬಂಡೇಪ್ಪ ಕಾಂಶಾಪುರ, ವಿರುಪಾಕ್ಷಿ ಸೇರಿದಂತೆ ಅನೇಕರು ಇದ್ದರು.