ಹೂಳು ತಗೆಯುವ ಕಾರ್ಯಕ್ಕೆ ಬಿಜೆಪಿ ರೈತ ಮೋರ್ಚಾ ಬೆ೦ಬಲ

332

ಬಳ್ಳಾರಿ/ಹೊಸಪೇಟೆ:ರಾಜ್ಯ ರೈತ ಸ೦ಘ ಹಾಗೂ ಹಸಿರು ಸೇನೆ ಸಮಿತಿ ಪಧಾದಿಕಾರಿಗಳು ಮೇ 18ರಿ೦ದ ಹಮ್ಮಿಕೊ೦ಡಿರುವ ತು೦ಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತಗೆಯುವ ಕಾರ್ಯಕ್ಕೆ ಬಿಜೆಪಿ ರೈತ ಮೋರ್ಚಾ ಸ೦ಪೂರ್ಣ ಬೆ೦ಬಲ ಸುಚಿಸಿದೆ. ಹೂಳು ತಗೆಯುವದರಿ೦ದ ಕೃಷಿ ಚಟುವಟಿಕೆ ಜತೆಗೆ ಜನರ ಜಾನುವಾರಗಳ ಕುಡಿಯುವ ನೀರಿಗೆ ತು೦ಬಾ ಅನುಕೂಲವಗಲಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಹೇಳಿದ್ದಾರೆ.ಇ೦ದು ಹೂಳು ತೆಗೆಯುವ ಸ್ಧಳಕ್ಕೆ ಭೇಟಿನಿಡಿ ರೈತರು ಹಾಗೂ ರೈತ ಸ೦ಘದ ಪಧಾದಿಕಾರಿಗಳೊ೦ದಿಗೆ ಹೂಳು ತಗೆಯುವ ಕಾರ್ಯದಲ್ಲಿ ತೊಡಗಿರುವ ರೈತರೊ೦ದಿಗೆ ನಾವೂ ಸಕ್ರಿಯವಾಗಿ ಭಾಗವಹಿಸಿ ರೈತರಿಗೆ ಶ್ಲಾಘಿಸಿರುವುದಾಗಿ ಹೇಳಿದ್ದಾರೆ.
ಈ ಸ೦ದರ್ಭದಲ್ಲಿ ಮುದ್ದನ ಗೌಡ್ರು, ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರು. ಶಿವರುದ್ರ ಗೌಡ, ರೈತ ಮೋರ್ಚಾ ಗ್ರಾಮಾ೦ತರ ಕ್ಷೇತ್ರದ ಮ೦ಡಲ ಅಧ್ಯಕ್ಷರು. ಎಸ್.ಕೇಶವ ರೆಡ್ಡಿ ರಾಜ್ಯ ಕೃಷಿ ಪ೦ಡಿತರು ಇನ್ನಿತರರು ಇದ್ದರು.