ಕೆರೆಯ ಹದ್ದು ಬಸ್ತುಗಾಗಿ ಸಂಘಟನೆಗಳ ಒತ್ತಾಯ

594

ಬಳ್ಳಾರಿ /ಹೊಸಪೇಟೆ:ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಳಿ ಇರುವ ಐತಿಹಾಸಿಕ ಹಳ್ಳಿಕೆರೆಯ ಅಂಗಳಕ್ಕಾಗಿ ಸ್ವಾಧೀನ ಪಡಿಸಿಕೊಂಡ ಹೆಚ್ಚುವರಿ ಜಮೀನನ್ನು  ಕಂದಾಯ ಇಲಾಖೆಯ ಸುಪರ್ದಿಗೆ ಪಡೆದುಕೊಂಡು, ಕೆರೆಯ ಹದ್ದು ಬಸ್ತು ಕಾರ್ಯವನ್ನು ಹೊಸದಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಜನ ಸಂಗ್ರಾಮ ಪರಿಷತ್ತು ಹಾಗೂ ಕಮಲಾಪುರದ ಗಂಡುಗಲಿ ಕುಮಾರರಾಮ ಯುವ ಸೇನೆ ಜಿಲ್ಲಾಧಿಕಾರಿ ರಾಮ ಪ್ರಸಾತ್ ಮನೋಹರ್ ಅವರನ್ನು ಆಗ್ರಹಿಸಿದೆ.

ಕಂದಾಯ ಇಲಾಖೆ ಭೂ ದಾಖಲೆಗಳಲ್ಲಿ ಕೆರೆಯ ಅಂಗಳಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳ ಮಾಲಿಕತ್ವವು ಭೂ ಸ್ವಾಧೀನವಾಗಿ 17ವರ್ಷ ಕಳೆದರೂ ಕಂದಾಯ ಇಲಾಖೆಗೆ ವರ್ಗವಾಣೆಯಾಗಿರುವುದಿಲ್ಲ. ಸರ್ವೇ ಅಧಿಕಾರಿಗಳು ಈ ಜಮೀನುಗಳ ಮಾಲೀಕತ್ವವು ಇನ್ನೂ ಕಂದಾಯ ಇಲಾಖೆ ವರ್ಗವಣೆಯಾಗದೆ, ಭೂ ದಾಖಲೆಗಳಲ್ಲಿ ಕೆರೆಯ ಅಂಗಳ ಎಂದು ನಮೂದಾಗದೇ, ಈ ಜಮೀನುಗಳು ಮೂಲ ಪಟ್ಟಾದಾರರ ಹೆಸರಿನಲ್ಲಿ ಉಳಿದು ಕೊಂಡಿರುವುದರಿಂದ ಈ ಜಮೀನುಗಳನ್ನು ಕೆರೆಯ ಅಂಗಳ ಎಂದು ಪರಿಗಣಿಸಿ ಹದು ್ದಬಸ್ತು ಕೈಗೊಳ್ಳಲು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2000 ನೇ ಇಸ್ವಿಯಲ್ಲಿ ಜರುಗಿದ ಭೂ ಸ್ವಾಧೀನ ಪ್ರಕ್ರಿಯೆಯ ನಂತರ ಹಳ್ಳಿಕೆರೆ ಅಂಗಳದ ವ್ಯಾಪ್ತಿಯು 46 ಎಕರೆ 59 ಸೇಂಟ್ಸ್ ದಿಂದ 118 ಎಕರೆ 60 ಸೇಂಟ್ಸ್ ಗಳಿಗೆ ವಿಸ್ತಾರಗೊಂಡಿದೆ. ಕೆರೆಯ ಅಂಗಳಕ್ಕಾಗಿ ಹೆಚ್ಚುವರಿ 72 ಎಕರೆ 01 ಸೇಂಟ್ಸ್ ಭೂ ಸ್ವಾಧೀನವಾಗಿ 17 ವರ್ಷ ಕಳೆದರೂ, ನ್ಯಾಯಾಲಯದ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ, ಕಂದಾಯ ಇಲಾಖೆಯ ಭೂ ದಾಖಲಾತಿಗಳಲ್ಲಿ ಪಟ್ಟಾ ಬದಲಾವಣೆಯಾಗದೇ ಇರುವುದು ಕೆರೆಯ ಒಟ್ಟು 118 ಎಕರೆ 60 ಸೇಂಟ್ಸ್ ಪ್ರದೇಶದ ಸರ್ವೇ ನಡೆಸಿ ಹದ್ದು ಬಸ್ತು ಕಾರ್ಯ ಮಾಡುವುದು ತಾಂತ್ರಿಕವಾಗಿ ಸಾಧ್ಯವಾಗುತ್ತಿಲ್ಲ. ಆದಕಾರಣ, ಜಿಲ್ಲಾಧಿಕಾರಿಗಳು ಈ ತಾಂತ್ರಿಕ ತೊಡಕು ನಿವಾರಿಸಿ ಹೊಸದಾಗಿ ಸರ್ವೇ ನಡೆಸಿ, ಕೆರೆಯ ಗಡಿ ಗುರುತಿಸಿ, ಹದ್ದು ಬಸ್ತು ಮಾಡಿಸಿ ಈ ಐತಿಹಾಸಿಕ ಕೆರೆಯನ್ನು ಸೂಕ್ತ ನಿರ್ವಹಣೆ ಮಾಡಿ ಸಂರಕ್ಷಿಸಬೇಕು ಎಂದು ಜನಸಂಗ್ರಾಮ ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ ಮಾಳಗಿ ಇತರರು ಒತ್ತಾಯಿಸಿದ್ದಾರೆ.

ಹಳ್ಳಿಕೆರೆ, ಐತಿಹಾಸಿಕ ದಾಖಲೆಗಳ ಪ್ರಕಾರ ವಿಜಯನಗರ ಸಾಮ್ರಾಜ್ಯವು ತನ್ನ ವೈಭವದ ಉಚ್ಚ್ರಾಯ ಅವಧಿಯಲ್ಲಿ ಸುಮಾರು 1540 ರಲ್ಲಿ  ವಿಜಯನಗರದ ದೊರೆ ಅಚ್ಯುತ ದೇವರಾಯನಿಂದ ನಿರ್ಮಿಸಲ್ಪಟಿದು ಎಂದು ತಿಳಿದು ಬರುತ್ತವೆ. ಅಚ್ಯುತ ದೇವರಾಯನ್ನು ತನ್ನ ಪಟ್ಟದ ರಾಣಿ ವರದಾದೇವಿ ನೆನಪಿನಾಥ9ವಾಗಿ ನಿರ್ಮಿಸಲಾಗಿದ್ದ ವರದಾದೇವಿ ಅಮ್ಮನ ಪಟ್ಟಣ ಅಥವಾ ವರದರಾಜ ಅಮ್ಮನ ಪಟ್ಟಣ ಅಥವಾ ವರದ ರಾಜಮ್ಮನ ಪೇಟೆ ಎಂಬ ಉಪ ನಗರವನ್ನು ಇಂದಿನ ಪಟ್ಟಾಭಿರಾಮ ದೇವಸ್ಥಾನದ ಸುತ್ತಲೂ ನಿರ್ಮಿಸಿದ್ದನು. ಇದು ಒಂದು ವಾಣಿಜ್ಯ ಕೇಂದ್ರವಾಗಿತ್ತು ಎಂದು ಇತಿಹಾಸದಿಂದ ತಿಳಿದು ಬಂದಿದೆ.

ಸರ್ವೇ ಕಾರ್ಯ

ಹೊಸಪೇಟೆ:ತಾಲ್ಲೂಕಿನ ಐತಿಹಾಸಿಕ ಕಮಲಾಪುರ ಕೆರೆಯ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿರುವ ಕಂದಾಯ, ಭೂ ಮಾಪನ ಮತ್ತು ನೀರಾವರಿ ಇಲಾಖೆಯ ಸಿಬಂದ್ದಿ ಜಂಟಿ ತಂಡ, ಇದೀಗ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಳಿ ಇರುವ ಐತಿಹಾಸಿಕ ಹಳ್ಳಿಕೆರೆ ಸರ್ವೇ ಕಾರ್ಯವನ್ನು ಶ್ರುಕವಾರ ಆರಂಭಿಸಿದೆ.

ಜಿಲ್ಲಾಧಿಕಾರಿ ರಾಮ ಪ್ರಸಾತ್ ಮಾನಹರ್ ಆದೇಶ ಅನುಸಾರ ಬಳ್ಳಾರಿ ಜಿಲ್ಲೆಯ ಕೆರೆಗಳ ಸರ್ವೇ ಕಾರ್ಯ ನೆಡೆಸುವ ಮೂಲಕ ಅಕ್ರಮ ಒತ್ತುವರಿ ಪತ್ತೆ ಮಾಡಿ, ಬೌಂಡರಿ ಕಲ್ಲುಗಳನ್ನು ನಡೆಲು ಸರ್ವೇ ತಂಡ ಮುಂದಾಗಿದೆ. ಭೂಮಾಪಕರಾದ ಸಿದ್ದಪ್ಪ, ಪ್ರಸನ್ನ, ಮಂಜುನಾಥ, ಕರಿಬಸಪ್ಪ ಸರ್ವೇ ನಡೆಸಿದರು. ಗಂಡುಗಲಿ ಕುಮಾರರಾಮ ಯುವ ಸೇನೆಯ ಮುಖಂಡರಾದ ಭರಮಪ್ಪ ನಾಯಕ, ಮುಸ್ತಪ್ಪ ನಾಯಕ, ಕುಪ್ಪೇಂದ್ರ ನಾಯಕ, ಷಣ್ಮುಖ ಗರಡಿ, ರೈತ ಮುಂಖಡರಾದ ಅಂಗಡಿ ನಾಗರಾಜ್, ಎಂ.ಕೃಷ್ಣ ಹಾಜರಿದ್ದರು.