ಮೌಢ್ಯತೆಯೊ.. ಪರಾಕಾಷ್ಟೆಯೋ,

263

ಬಳ್ಳಾರಿ /ಕೊಟ್ಟೂರು ದೈವಿವಾಣಿಯೋ, ಮೌಢ್ಯತೆಯ ಪರಾಕಾಷ್ಟೆಯೋ, ಕರ ಬರಗಾಲದಲ್ಲಿ ಕೆರೆ ನೀರು ಖಾಲಿ

ಬರದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಹಿಂದೆಂದೂ ಕಾಣದಂತಹ ಜಲಕ್ಷಾಮ ತಲೆದೋರಿದೆ. ಇಂತಹ ಪರಿಸ್ಥಿತಿಯಲ್ಲಿ, ‘ದೈವೀವಾಣಿ’ ನೆಪದಲ್ಲಿ ತುಂಬಿದ ಕೆರೆಯನ್ನು ಗ್ರಾಮವೊಂದರ ಜನರು ರಾತ್ರೋರಾತ್ರಿ ಖಾಲಿ ಮಾಡಿದ್ದಾರೆ!

‘ತುಂಬಿದ ಕೆರೆ ಖಾಲಿ ಮಾಡಿದರೆ ಈ ವರ್ಷ ಉತ್ತಮ ಮಳೆಯಾಗುತ್ತದೆ’ ಎಂಬ ಮಾತು ನಂಬಿ, ಇಲ್ಲಿಗೆ ಸಮೀಪದ ರಾಮದುರ್ಗದ ಗ್ರಾಮಸ್ಥರು ತಮ್ಮೂರಿನ ಸಮೃದ್ಧ ಜಲಮೂಲವನ್ನು ಬರಿದು ಮಾಡಿದ್ದಾರೆ.

ರಾಮದುರ್ಗದ ಕೆರೆ, ಬರದಲ್ಲೂ ನೀರಿನಿಂದ ನಳನಳಿಸುತ್ತಿತ್ತು. ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ನೀರಿನ ಪ್ರಮಾಣವೂ ಹೆಚ್ಚಿತ್ತು. ಸುತ್ತಮುತ್ತಲಿನ ಗ್ರಾಮಗಳಾದ ಚಂದ್ರಶೇಖರಪುರ, ಕುದುರಡೇವು, ನಾಗರಹುಣಸೆ, ಗೊಲ್ಲರಹಟ್ಟಿ ಗ್ರಾಮದ ಜಾನುವಾರುಗಳಿಗೆ ಆಸರೆಯಾಗಿತ್ತು.

‘ನಾಲ್ಕೈದು ವರ್ಷದಿಂದ ಕೆರೆಯಲ್ಲಿ ನೀರು ಉಳಿದುಕೊಂಡಿದೆ. ಇದೇ ಕಾರಣದಿಂದಾಗಿ ಗ್ರಾಮದಲ್ಲಿ ಎರಡು ವರ್ಷದಿಂದ ಮಳೆಯಾಗುತ್ತಿಲ್ಲ ಎಂದು ದೈವೀವಾಣಿಯಾಗಿದೆ’ ಎಂದು ಸೋಮವಾರ ರಾತ್ರಿ ಹಿರಿಯರೊಬ್ಬರು ಕೆಲ ವ್ಯಕ್ತಿಗಳ ಮುಂದೆ ಹೇಳಿದ್ದಾರೆ. ಈ ಮಾತು ಗ್ರಾಮದಾದ್ಯಂತ ಶರವೇಗದಲ್ಲಿ ಹರಡಿದೆ. ಮಳೆ ಬಾರದಿರಲು ಕೆರೆಯಲ್ಲಿ ನೀರು ತುಂಬಿರುವುದೇ ಕಾರಣ ಎಂದು ಭಾವಿಸಿದ ಗ್ರಾಮದ ಕೆಲವರು, ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಕೆರೆಯ ತೂಬು ಎತ್ತಿದ್ದಾರೆ. ಬೆಳಗಾಗುವಷ್ಟರಲ್ಲಿ ಕೆರೆಯ ನೀರು ಖಾಲಿಯಾಗಿದೆ