ಸಾರ್ವಜನಿಕರ ಆಸ್ತಿ ರಕ್ಷಣೆಗೆ ಸಮಿತಿ ರಚನೆ

308

ಬಳ್ಳಾರಿ /ಹೊಸಪೇಟೆ: ಸಾರ್ವಜನಿಕರ ಹಾಗೂ ಸರ್ಕಾರದ ಆಸ್ತಿ ರಕ್ಷಣೆಗಾಗಿ ಸಮಿತಿಯೊಂದನ್ನು ರಚಿಸುವ ಕುರಿತು ಚಿಂತನೆ ನಡೆದಿದೆ ಎಂದು ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್, ತಿಳಿಸಿದರು.

ಪತ್ತಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ಹೊಣೆ ನಗರಸಭೆ ಮೇಲಿದ್ದು, ಇದಕ್ಕಾಗಿ ಶೀಘ್ರ ಆಸ್ತಿ ರಕ್ಷಣೆಗಾಗಿ ಸಮಿತಿಯೊಂದನ್ನು ರಚಿಸಲಾಗುವುದು. ನಗರಸಭೆಯಲ್ಲಿ ಕಚೇರಿಯಲ್ಲಿ ನಡೆದ ಇತ್ತೀಚಿನ ವಿದ್ಯಮಾನಗಳಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಪಾರಂ-3 ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಕೂಡಲೇ ನಗರಸಭೆ ಕಂದಾಯ ವಿಭಾಗಕ್ಕೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ, ಪಾರಂ-3 ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದರು.

ನಗರಸಭೆಯಲ್ಲಿ ಒಟ್ಟು 14 ಸಿಬ್ಬಂದಿಗಳನ್ನು ತುಂಬಬೇಕಿದೆ. ಇದರಲ್ಲಿ 5 ಸಿಬ್ಬಂದಿಗಳನ್ನು ಈಗಾಗಲೇ ಉಪ ವಿಭಾಗಾಧಿಕಾರಿಗಳು ನಿಯೋಜಿಸಿದ್ದಾರೆ. ಸಿಬ್ಬಂದಿಗಳ ಕೊರತೆಯಿಂದ ಫಾರಂ ನಂ.3 ನೀಡಲಾಗುತ್ತಿಲ್ಲ. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಇನ್ನು 3-4 ದಿನದೊಳಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಫಾರಂ ನಂ.3ಗಾಗಿ 300 ಅರ್ಜಿಗಳು ಬಂದಿವೆ. ಖಾತಾ ಬದಲಾವಣೆಗಾಗಿ 100, ಮತ್ತು ಆಶ್ರಯ ಮನೆಗಾಗಿ 600 ಅರ್ಜಿಗಳು ಬಂದಿವೆ ಎಂದು ಸ್ಪಷ್ಟಪಡಿಸಿದ