ಅಭಿನಂದನಾ ಕಾರ್ಯಕ್ರಮ

528

ಬಳ್ಳಾರಿ /ಹೊಸಪೇಟೆ ಮರಿಯಮ್ಮನಹಳ್ಳಿ : ಮುಂದಿನ ವಿಧಾನ ಸಭಾಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಹ.ಬೊ.ಹಳ್ಳಿ ವಿಧಾನ ಸಭಾ ಕ್ಷೇತ್ರ ಕ್ಕೆ ನಾನು ಪ್ರಬಲ ಆಕಾಂಕ್ಷಿ ಎಂದು ಕೆ .ಪಿ.ಸಿ.ಸಿ.ಸದಸ್ಯ ಎಸ್ . ಕೃಷ್ಣ ನಾಯ್ಕ ಹೇಳಿ ದರು . ಅವರು ಶುಕ್ರವಾರ , ಹ.ಬೊ.ಹಳ್ಳಿ ಕ್ಷೇತ್ರ ದ ಯುವಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈ .ಮಂಜುನಾಥ , ಉಪಾಧ್ಯಕ್ಷ ರಾಗಿ ಆಯ್ಕೆಯಾದ ರಾಘವೇಂದ್ರ ರವರ ಅಭಿನಂದನಾ ಕಾರ್ಯಕ್ರಮದ ನಂತರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು .ಕಳೆದ ಚುನಾವಣೆ ಗಳಲ್ಲಿ ಹ.ಬೊ.ಹಳ್ಳಿ ಕ್ಷೇತ್ರ ಕ್ಕೆ ಮೀಸಲಾತಿಯನ್ವಯ ನೀಡಿದ ಟಿಕೇಟ್ , 2018 ರ ಚುನಾವಣೆ ಗೆ ಬದಲಾಯಿಸಿ ಬಂಜಾರಸಮುದಾಯಕ್ಕೆ ನೀಡುವ ಭರವಸೆಯನ್ನು ಪಕ್ಷದ ಹೈಕಮಾಂಡ್ ನೀಡಿದೆ . ಅಲ್ಲದೆ ಪಕ್ಷದ ಸಂಘಟನೆ ಮತ್ತು ಪಕ್ಷಕ್ಕಾಗಿ ದುಡಿದವರಿಗೆ , ಸ್ಥಳೀಯ ರ ಅಭಿಪ್ರಾಯ ಸಂಗ್ರಹಿಸಿ ಬೀ ಫಾರಂ ಅನ್ನು ಪಕ್ಷ ನೀಡುತ್ತದೆ ಎಂದರು .ಹ.ಬೊ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಏಕಾ – ಏಕಿ ಬದಲಾಯಿಸಿರುವುದು , ಸಮಂಜಸವಲ್ಲ ಪ್ರಬಲ ಸಮುದಾದವರು ಅಧ್ಯಕ್ಷರಾಗಿ ದ್ದರು ಈಗ ಅವರನ್ನು ಬದಲಾಯಿಸಿ , ಪ್ರಬಲವಲ್ಲದ ಸಮುದಾಯ ದವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿಂದೆ ಸರ್ವಾಧಿಕಾರಿ ರಾಜಕಾರಣಿ ಯ ಹುನ್ನಾರವಿದೆ , ಇದರಿಂದ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂದರು . ಸನ್ಮಾನ ಸ್ವೀಕರಿಸಿದ ಹ.ಬೊ.ಹಳ್ಳಿ ಯುವಕಾಂಗ್ರೇಸ್ ನ ನೂತನ ಅಧ್ಯಕ್ಷ ಈ . ಮಂಜುನಾಥ ಮಾತನಾಡಿ , ಮುಂದಿನ ವಿಧಾನ ಸಭಾಚುನಾವಣಾ ಹೊತ್ತಿಗೆ ಪಕ್ಷವನ್ನು ಬಲವಾಗಿ ಸಂಘಟಿಸಿ , ಪಕ್ಷವನ್ನು ಬಲವರ್ದನೆ ಗೊಳಿಸುತ್ತೇನೆ . ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಯುವಕರು ನಮಗೆ ಸಹಕರಿಸಿ ಪಕ್ಷದ ಬೆಳವಣಿಗೆ ಯಲ್ಲಿ ತೊಡಗಿಸಿಕೊಳ್ಳಲು ಮನವಿಮಾಡಿದರು . ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ರಾದ ಅಕಾರಿಮಹೇಶ , ನಗಾರಿ ಬುಡೇನ್ ಸಾಬ್ , ಹುರುಕೊಳ್ಳಿ ಮಂಜುನಾಥ , ಕೆ .ಎಚ್ . ಸುಬ್ರಹ್ಮಣ್ಯ , ಡಣಾಯಕನಕೆರೆ ಗ್ರಾ .ಪಂ.ಅಧ್ಯಕ್ಷ ಸುರೇಶ್ , ಈ .ಶ್ರೀ ನಿವಾಸ , ಸಿ . ದೇವೆಂದ್ರಪ್ಪ , ಕನ್ನಾಳೆಪ್ಪ , ಗರಗ ಪ್ರಕಾಶ , ಹೇಮ್ಲನಾಯ್ಕ ಕಟ್ಟಿಮನಿ , ಇತರರಿದ್ದರು .