ದಲಿತರ ಮನೆಯಲ್ಲಿ ಉಪಹಾರ ಸೇವನೆ..

281

ಬಾಗಲಕೋಟೆ: ಜನಸಂಪರ್ಕ ಅಭಿಯಾನ ಕೈಗೊಂಡ ಮಾಜಿ ಸಿಎಂ ಬಿಎಸ್ವೈ..ದಲಿತರ ಬಗ್ಗೆ ಮಾತನಾಡೋ ಹಕ್ಕು ಕಾಂಗ್ರೆಸ್ಗೆ ಇಲ್ಲ..ಸಿಎಂ ಸಿದ್ದರಾಮಯ್ಯ ಧಿಮಾಕಿನ ಮಾತುಗಳನ್ನಾಡುತ್ತಿದ್ದಾರೆ..
ಅಂಬೆಡ್ಕರ್ ಸಾವಿನಲ್ಲಿ ರಾಜಕೀಯ ಮಾಡಿದ ಕಾಂಗ್ರೆಸ್ ಎಂದ ಬಿಎಸ್ವೈ .
======

ಬಾಗಲಕೋಟೆ ಯಲ್ಲಿ ಜನ ಸಂಪರ್ಕ ಅಭಿಯಾನ ಆರಂಭಿಸಿದ ಮಾಜಿ ಸಿಎಂ ಬಿಎಸ್ ವೈ..ನಗರದ ಸ್ಲಂ ಕಾಲೋನಿಯಲ್ಲಿ ಪಾದಯಾತ್ರೆ ಕೈಗೊಂಡ್ರು..ಮಾಜಿ ಸಿಎಂ ಗೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಮುಖಂಡರ ಸಾಥ್..ಮನೆಮನೆಗೆ ತೆರಳಿ ಸಾರ್ವ ಜನಿಕರ ಕುಂದುಕೊರತೆ ಗಳನ್ನು ಮಾಜಿ ಸಿಎಂ ಆಲಿಸಿದ್ರು..ನಂತ್ರ ಸ್ಲಂ ಕಾಲೊನಿಯ ದಲಿತ ವ್ಯಕ್ತಿ ರಂಗಪ್ಪ ಕುಂದರಗಿ ಅವರ ಮನೆಯಲ್ಲಿ ಬೆಳಗಿನ ಉಪಹಾರ ಸೇವನೆ ಮಾಡಿದ್ರು..

ನಂತರ ಬಸವೇಶ್ವರ ಆಡಿಟೋರಿಯಂ ನಲ್ಲಿ ಸುದ್ದಿಗೊಷ್ಠಿ ನಡಿಸಿದ ಮಾಜಿ ಸಿಎಂ ಯಡಿಯೂರಪ್ಪ,

ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದ್ದರಿಂದ ಧಿಮಾಕಿನ ಮಾತುಗಳನ್ನಾಡ್ತಿದ್ದಾರೆ ಸಿದ್ದರಾಮಯ್ಯ.

ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ವೇಳೆಯಲ್ಲಾದ ಘಟನೆಗಳ ಕುರಿತು ಧಿಮಾಕಿನ ಮಾತುಗಳನ್ನ ಹೆಳುತ್ತಿದ್ದಾರೆ..ಕಾಂಗ್ರೆಸ್ ನಲ್ಲಿ ತಾನೇದೊಡ್ಡವರೆಂಬಂತೆ ಮಾತನಾಡೋದು ಸರಿಯಲ್ಲ..ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ಬಡವರ ಪಾಲಿಗೆ ಸತ್ತಂತಾಗಿದೆ ರಾಜ್ಯ ಸರ್ಕಾರ ಎಂದ ಬಿಎಸ್ ವೈ ಟೀಕಿಸಿದ್ರು.

ಕಾಂಗ್ರೆಸ್ ಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ..ಅಂಬೇಡ್ಕರ್ ಸಾವಿನಲ್ಲಿ ರಾಜಕೀಯ ಮಾಡಿದ್ದೆ ಕಾಂಗ್ರೆಸ್..ದಲಿತ ವಿರೋಧಿ ನೀತಿಯನ್ನ ಕಾರ್ಯಕರ್ತರು ಪ್ರತಿಭಟಿಸಬೇಕಿದೆ..ರಾಜ್ಯದಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು ಮರಳು ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ರು..