ಕೆರೆ ಹೂಳೆತ್ತುವ ಕಾರ್ಯಾಚರಣೆ ನೀರಿಕ್ಷೆಗೂ ಮೀರಿದ ರೈತ ಸ್ಪಂದನೆ”

338

ಬಳ್ಳಾರಿ / ಹೊಸಪೇಟೆ: ಕಮಲಾಪುರ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ರೈತರಿಂದ ನೆಡೆಯುತ್ತಿರುವ ಹೂಳೆತ್ತುವ ಕಾರ್ಯಾಚರಣೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದು ನೀರಿಕ್ಷೆಗೂ ಮೀರಿದ ರೈತರ ಸ್ಪಂದನೆ ಪಡೆಯುತ್ತಿದೆ. ಹೊಸಪೇಟೆ ತಾಲೂಕು ಕಮಲಾಪುರ ಮತ್ತು ಕಂಪ್ಲಿ ಹೋಬಳಿಯ ರೈತರಷ್ಟೇ ಅಲ್ಲದೇ, ಕೆರೆಯ ಫಲವತ್ತಾದ ಹೂಳಿನ ಮಾಹಿತಿ ರೈತ ಸಮುದಾಯದಲ್ಲಿ ಬಾಯಿಯಿಂದ ಬಾಯಿಗೆ ಹರಡಿ ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಿಗಿ ಸಿಂಧನೂರು ಭಾಗದ
ರೈತರಗಳು ಕೂಡ ಕಮಲಾಪುರ ಕೆರೆಯ ಅಂಗಳಕ್ಕೆ ಧಾವಿಸಿ ಹೂಳು ಸಾಗಿಸಲು ಸ್ಥಳೀಯ ಟ್ರ್ಯಾಕ್ಟರ್ ಮಾಲೀಕರಿಗೆ ಬೇಡಿಕೆ ಇಡುತ್ತಿದ್ದಾರೆ.

ಇಂದು ನಿನ್ನೆಗಿಂತ ಅಧಿಕ ಸಂಖ್ಯೆಯಲ್ಲಿ 15 ಜೆ ಸಿ ಬಿ 60
ಟ್ರ್ಯಾಕ್ಟರ್ ಗಳು ಹೂಳು ಎತ್ತಲು ಕೆರೆಯ ಅಂಗಳಕ್ಕೆ ಇಳಿದಿರುವುದ  ರಿಂದ ಹೊಸಪೇಟೆಯಿಂದ ಕಮಲಾಪುರ ಪಟ್ಟಣ ಸೇರುವ ಮಾಗ೯ದಲ್ಲಿರುವ ಕೆರೆಯ ಕೋಡಿ ಬಳ್ಳಿ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತತೆಯಾಗಿತ್ತು ನಂತರ ಸ್ಥಳೀಯ ಪೋಲೀಸರು ಆಗಮಿಸಿ ವಾಹನ ಸಂಚಾರ ಸುಗಮ ಗೊಳಿಸದ್ದರು ಈ ಸಂದರ್ಭದಲ್ಲಿ  ರೈತರು ಮತ್ತು ಟ್ಯಾಂಟರ್ ಚಾಲಕರು ಜನ ಸಂಗ್ರಾಮ ಪರಿಷತ್ತು ಮುಖಂಡ ಶಿವಕುಮಾರ ಮಾಳಗಿ ನೇತೃತ್ವದಲ್ಲಿ ಸಭೆ ಸೇರಿ ಕೆರೆಯ ಕೋಡಿ ಬಳಿ ಇರುವ ಮಾಗ೯ದ ಮೂಲಕವೇ ಹೂಳು ತುಂಬಿಕೊಂಡು ಹೊರ ಹೋಗುವ ಹಾಗೂ ಕೆರೆಯ ಹೂಳು ತುಂಬಿಕೊಳ್ಳಲು ಒಳ ಬರುವ ಟ್ರ್ಯಾಕ್ಟರ್ ಗಳಿಗೆ ಇದು ಒಂದೇ ಮಾಗ೯ವಾಗಿರುವುದರಿಂದ ವಾಹನ ದಟ್ಟಣೆಯಾಗುತ್ತಿದ್ದು ಇದನ್ನು ತಪ್ಪಿಸಲು ಕೆರೆ ತಾಂಡದಿಂದ ಕೆರೆಯ ಅಂಗಳಕ್ಕೆ ಹೋಗುವ ರಸ್ತೆ ಮೂಲಕ ಮತ್ತು ಚಾವಡಿಕೇರಿ ಹಿಂಭಾಗದಲ್ಲಿರುವ ರೈತರ ಕಣಗಳ ಮೂಲಕವಾಗಿ ಕೆರೆಯ ಅಂಗಳ ಪ್ರವೇಶಿಸಿ ಹೂಳು ಎತ್ತಿಕೊಳ್ಳಲು ಅನುಮತಿಸಬೇಕೆಂದು ಸ್ಥಳಕ್ಕೆ ಆಗಮಿಸಿದ ಗ್ರಾಮ ಲೆಕ್ಕಾಧಿಕಾರಿ ರವಿಚಂದ್ರ ಗೊಗ್ಗಿ ಅವರನ್ನು ಆಗ್ರಹಿಸಿದರು.

ಕೆರೆಯ ಏರಿಯ ಮೇಲೆ ಕೆರೆಯ ಹೂಳೆತ್ತುವ ಕಾಯ೯ಚರಣೆಯಲ್ಲಿ ಸ್ವಯಂ ಸೇವಕರಾಗಿ ಶ್ರಮಿಸುತ್ತಿರುವ ಗಂಡುಗಲಿ ಕುಮಾರರಾಮ ಯುವಸೇನೆಯ ಮುಂಖಡರಾದ ಭರಮಪ್ಪ ನಾಯಕ, ಮುಸ್ತಪ್ಪ ನಾಯಕ, ಕುಪ್ಪೇಂದ್ರ ನಾಯಕ, ಗರಡಿ ಷಣ್ಮುಖ, ಪ್ರಸಾದ್ ನಾಯಕ, ಮಾಳ್ಗಿ ತಿಮ್ಮಣ್ಣ ನಾಯಕ, ಜನ ಸಂಗ್ರಾಮ ಪರಿಷತ್ ಮುಖಂಡ ಶಿವಕುಮಾರ ಮಾಳಗಿ
ಕೆರೆಯ ಹೂಳು ತೆಗೆಯುತ್ತಿರುವ ಟ್ರ್ಯಾಕ್ಟರ್ ಮತ್ತು ಜೆಸಿಬಿ ಮಾಲೀಕರ ಸಭೆ ಕರೆದು ಕೆರೆಯ ಹೂಳೆತ್ತುವ ಸಂದರ್ಭದಲ್ಲಿ ಮರಳು ಕಂಡು ಬಂದಲ್ಲಿ ಯಾವುದೇ ಕಾರಣಕ್ಕೇ ಹೂಳೆತ್ತುವ ನೆಪದಲ್ಲಿ ಮರಳು ಸಾಗಣೆ ಮಾಡಕೂಡದೇಂದು ಜಿಲ್ಲಾಡಳಿತವು ಕಟ್ಟಪ್ಪಣೆ ವಿಧಿಸುವುದರಿಂದ ಯಾರೊಬ್ಬರೂ
ಮರಳು ಸಾಗಿಸುವ ಅಕ್ರಮಕ್ಕೆ ಕೈ ಹಾಕಬಾರದೇಂದು ಎಚ್ಚರಿಸಿದರು. ಒಂದು ವೇಳೆ, ಯಾವುದೇ ಟ್ರ್ಯಾಕ್ಟರ್ ಗಳು
ಮರಳು ಸಾಗಣಿ ಮಾಡುವುದು ಕಂಡು ಬಂದಲ್ಲಿ ಯುವ ಸೇನೆಯ ಸ್ವಯಂ ಸೇವಕರೇ ಅಂತಹ ಟ್ರ್ಯಾಕ್ಟರ್ ನ್ನು ಹಿಡಿದು
ಜಿಲ್ಲಾಡಳಿತಕ್ಕೆ ಮುಂದಿನ ಸೂಕ್ತಕ್ಕೆ ಒಪ್ಪಿಸುವುದಾಗಿ ಹೇಳಿದರು.