ನಾಯಕ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯ

416

ಬಳ್ಳಾರಿ /ಹೊಸಪೇಟೆ:ನಾಯಕ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ  ಡಿವೈಎಫ್. ಹಾಗೂ ಸಿಪಿಐ(ಎಂ) ಪದಾಧಿಕಾರಿಗಳು  ಒತ್ತಾಯಿಸಿದ್ದಾರೆ.

ಈ ಕುರಿತು ಗ್ರೇಡ್-2 ತಹಶೀಲ್ದಾರ್ ಶ್ರೀಮತಿ ರೇಣುಕಾ ಅವರಿಗೆ ಸೋಮವಾರ ಮನವಿ ಸಲ್ಲಿಸಿರುವ ಅವರು  ಶಾಸಕ  ಆನಂದ್‍ಸಿಂಗ್ ಅವರು  ಲೆಟರ್‍ಹೆಡ್‍ನಲ್ಲಿ ಬರೆದ ಪತ್ರದಲ್ಲಿ ನಾಯಕ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಹೇಳಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಿಂದಾಗಿ ಅನೇಕ ಕಡೆ ಗಂಭೀರ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಈ ಪತ್ರ ನನ್ನದಲ್ಲ, ರಾಜಕೀಯ ದುರುದ್ಧೇಶದಿಂದ ಹೀಗೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಪ್ರವೀಣ್‍ಸಿಂಗ್ ಮತ್ತು ಡಿ.ವೆಂಕಟರಣ ಇವರ ಹೆಸರನ್ನು ಪ್ರಸ್ತಾಪ ಮಾಡಿದ್ದು, ಇದನ್ನು ಖಂಡಿಸಿ   ಜಿಲ್ಲಾ ಪಂಚಾಯಿತಿ ಸದಸ್ಯ  ಪ್ರವೀಣ್‍ಸಿಂಗ್ ಮತ್ತು ಡಿ.ವೆಂಕಟರಣ ಅವರು ಕೂಡ  ಪತ್ರಿಕಾಗೋಷ್ಠಿ ನಡೆಸಿ, ಶಾಸಕ ಆನಂದ್‍ಸಿಂಗ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿ ಶಾಸಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿ ಈ ಪತ್ರವನ್ನು ಶಾಸಕರ ಕಾರ್ಯಾಲಯದಿಂದಲೇ ಹೋಗಿದೆ ತನಿಖೆ ನಡೆಯಲಿ ಎಂದು ಹೇಳಿದ್ದರು.

ಒಟ್ಟಾರೆ ನಾಯಕ ಸಮುದಾಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ರಾಜಕೀಯ ಗಾಳವಾಗ ಬಳಸಿಕೊಳ್ಳುತ್ತಿದ್ದಾರೆ. ಒಂದು ಸಮುದಾಯದ ಬಗ್ಗೆ ಜಾತಿನಿಂದನೆಯಾಗಿದೆ. ಇದನ್ನು ಅವರು ಹಗರುವಾಗಿ  ಪರಿಣಗಿಸಿದ್ದಾರೆ, ಆದರೆ ನಾಯಕ ವಾಲ್ಮೀಕಿ ಸಮಾಜಕ್ಕೆ ಇದು ಕಳಂಕ ಉಂಟುಮಾಡಿದಂತಾಗಿದೆ. ಅಲ್ಲದೇ ಕೋಮು ಗಲಬೆಗೆ ಪ್ರಚೋದನೆ ನೀಡಿದಂತಾಗಿದೆ. ಹಾಗಾಗಿ ಈ ಬಗ್ಗೆ ಗಂಭೀರವಾಗಿ ಪರಿಣಿಸಿ ಅವಹೇಳನಕಾರಿಯಾಗಿ ಬರೆದ ಪತ್ರದ ನಿಗೂಡವನ್ನು ಬಯಲಿಗೆ ಎಳೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

2015 ರಲ್ಲಿ ಇಂತಹ ಪ್ರಕರಣವು ನಗರದಲ್ಲಿ ಜರುಗಿತ್ತು. ಆ ಸಂದರ್ಭದಲ್ಲಿ ಜಾಗೃತ ನಾಯಕ ಬಳಗ ಮತ್ತು ನಮ್ಮ ಸಂಘನೆಗಳ ನೇತೃತ್ವದಲ್ಲಿ ಸಭೆ ನಡೆಸಿ ಶಾಂತಿಯನ್ನು ಕಾಪಾಡಲಾಗಿತ್ತು. ಪುನಃ ಇಂತಹ ಘಟನೆ ಜರುಗಿದೆ. ಈ ಬಗ್ಗೆ ಶೀಘ್ರವೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ಧಾರೆ.
ಈ ಸಂದರ್ಭದಲ್ಲಿ  ಮರಡಿ ಜಂಬಯ್ಯ ನಾಯಕ, ಎ.ಕರುಣಾನಿಧಿ,ಕೆ.ನಾಗರತ್ನಮ್ಮ, ಆರ್.ಭಾಸ್ಕರರೆಡ್ಡಿ, ಮಹೇಶ್ ಬಿಸಾಟಿ,ಎಂ.ಗೋಪಾಲ್,ಸುಮಂಗಲಮ್ಮ,ಬಿ.ರಮೇಶ್,ಸತ್ಯಮೂರ್ತಿ ಎಸ್,ವಸಂತ್ ಕಲಾಲ್,ಕಲ್ಯಾಣಯ್ಯ ಸೇರಿದಂತೆ ಇತರರು ಇದ್ದರು