ರೈತರ ಮೇಲೆ ಲಾಠಿಚಾಚ್೯ ಖಂಡಿಸಿ ಪ್ರತಿಭಟನೆ

285

ಮಂಡ್ಯ/ಮಳವಳ್ಳಿ : ಪಶ್ಚಿಮ ಬಂಗಾಳದಲ್ಲಿ ರೈತರ ಮೇಲೆ ಲಾಠಿಚಾಚ್೯ನಡೆಸಿದ ತೃಣಮೂಲ ಕಾಂಗ್ರೆಸ್ ಗೂಂಡಾಗಿರಿಯನ್ನು ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಕನಾ೯ಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಸಾರಿಗೆ ಬಸ್ ನಿಲ್ದಾಣ ದ ಮುಂಭಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿರುದ್ದ ಘೋಷಣೆ ಕೂಗಿದರು. ಇದೇ ಸಂದಭ೯ದಲ್ಲಿ ಪ್ರಾಂತ ರೈತ ಸಂಘ ಅಧ್ಯಕ್ಷ ಎನ್.ಎಲ್ ಭರತ್ ರಾಜ್ ಮಾತನಾಡಿ ಪಶ್ಚಿಮ ಬಂಗಾಳದಲ್ಲಿ ರೈತರು ತಮ್ಮ ನ್ಯಾಯಯುತ ಬೇಡಿಕೆಗಾಗಿ 11 ರೈತ ಸಂಘಟನೆಗಳು ಸೇರಿ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಗುಂಡಾ ಸಕಾ೯ರ ರೈತರ ಮೇಲೆ ಅಮಾನುಷವಾಗಿ ಲಾಠಿ ಚಾಚ್೯ ನಡೆಸಿ ಸಾವಿರಾರು ರೈತರನ್ನು ಬಂಧಿಸಿರುವುದು ಹಾಗೂ 25 ಶಾಸಕರು , ಸಂಸದರು ಸೇರಿದಂತೆ ಬಂಧಿಸಿರುವ ಕ್ರಮವನ್ನು ಪ್ರಾಂತ ರೈತ ಸಂಘ ಖಂಡಿಸುತ್ತದೆ ಎಂದರು ಮಮತಬ್ಯಾನರ್ಜಿ ಸಕಾ೯ರ ಎಡಪಕ್ಷಗಳ ಅಸ್ತಿತ್ವವನ್ನು ನಾಶಗೊಳಿಸುವ ಉದ್ದೇಶದಿಂದ ಪ್ರಜಾಸತ್ತಾತ್ಮಕ ಚಳುವಳಿಗಳನ್ನು ಹತ್ತಿಕ್ಕುವುದರ ಮೂಲಕ ಸರ್ವಾಧಿಕಾರಿ ದೋರಣೆಯನ್ನು ತೋರುತ್ತಿದೆ. ಈ ದೋರಣೆಯನ್ನು ಎಲ್ಲಾ ನಾಗರೀಕರು ಖಂಡಿಸಬೇಕಿದೆ ಹಾಗಾಗಿ ದೇಶದಲ್ಲಿ ನಡೆಯುವ ರೈತಪರ ಹೋರಾಟಕ್ಕೆ ಕನಾ೯ಟಕ ಪ್ರಾಂತ ರೈತ ಸಂಘ ಬೆಂಬಲಿಸುತ್ತದೆ ಎಂದರು. ಪ್ರತಿಭಟನೆಯಲ್ಲಿ ಸಂಘ ಕಾರ್ಯದರ್ಶಿ ಲಿಂಗರಾಜುಮೂರ್ತಿ, ಜಿ.ರಾಮಕೃಷ್ಣ, ತಿಮ್ಮೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು