ಸರ್ಕಾರಿ ಶಾಲೆ ಮುಂದೆ ಪೋಷಕರ ಕ್ಯೂ

610

ಬಳ್ಳಾರಿ /ಹೊಸಪೇಟೆ : ತಮ್ಮ ಮಕ್ಕಳಿಗೆ ಸೀಟು ಕೊಡಿಸಲು ಪಾಲಕರು ಖಾಸಗಿ ಶಾಲೆ ಮುಂದೆ ಕ್ಯೂ ನಿಲ್ಲೋದು ನೋಡಿದಿವಿ. ಡೊನೋಷನ್ ಕೊಟ್ಟರೂ ಸೀಟು ಸಿಗೋದಿಲ್ಲ. ಆದರೆ ಹೊಸಪೇಟೆಯ ಸರಕಾರಿ ಶಾಲೆಗೆ ಸೇರಿಸಲೂ ಪಾಲಕರು ಕ್ಯೂ ನಿಲ್ಲಬೇಕಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಾಲಕಿಯರ ಸರಕಾರಿ ಪ್ರೌಢಶಾಲೆ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುಂತೆ ಪ್ರತಿ ವರುಷ ಉತ್ತಮ ಶೈಕ್ಷಣಿಕ ಸಾಧನೆ ಮಾಡುತ್ತಿದೆ. ಈ ಕಾರಣಕ್ಕೆ ನಗರದ ಬಾಲಕಿಯ ಸರಕಾರಿ ಪ್ರೌಢಶಾಲೆಗೆ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸಲು ಕ್ಯೂ ನಿಲ್ಲಬೇಕು. ಖಾಸಗಿ ಶಾಲೆಯಂತೆ ಒಂದೇ ತರಗತಿಗೆ ಹಲವು ಸೆಕ್ಷನ್ ಗಳಿರುವ ಈ ಶಾಲೆಯಲ್ಲಿ ಸೇರಿಸಿದರೆ ಉತ್ತಮ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಪೋಷಕರದ್ದು. ಲಕ್ಷ ಲಕ್ಷ ಡೊನೇಷನ್ ಕೊಟ್ಟು ಖಾಸಗಿ ಶಾಲೆಗೆ ಸೇರಿಸುವುದಕ್ಕಿಂತ ಉತ್ತಮ ಸಾಧನೆ ಮಾಡುತ್ತಿರುವ ಕನ್ನಡದ ಸರಕಾರಿ ಶಾಲೆಗೆ ಸೇರಿಸುವುದು ಎಷ್ಟೋ ವಾಸಿ. ಈ ಕಾರಣಕ್ಕೆ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಡಿಮ್ಯಾಂಡ್ ಹೆಚ್ಚಾಗಿದ್ದು, ಪೋಷಕರು ಸರತಿ ಸಾಲಿನಲ್ಲಿ ನಿಂತು ಶಾಲೆಗೆ ಸೇರಿಸುತ್ತಿದ್ದಾರೆ ಎನ್ನುತ್ತಾರೆ ಶಾಲೆಯಮುಖ್ಯಗುರುಗಳಾದ ಕಂಪ್ಲಿ ಚಂದ್ರಪ್ಪ.