ಹೂಳುತ್ತೆವ ಕೆಲಸಕ್ಕೆ ನೆರೆರಾಜ್ಯ ಸಹಕಾರ ಅಗತ್ಯ

248

ಬಳ್ಳಾರಿ /ಹೊಸಪೇಟೆ : ಕರ್ನಾಟಕದ ಮತ್ತು ತುಂಗಭದ್ರ ಜಲಾಶಯ ಆಂಧ್ರಪ್ರದೇಶ ರಾಜ್ಯಕ್ಕೂ ಸಂಬಂಧವಿರುವುದರಿಂದ ಆಂಧ್ರ ಸರ್ಕಾರಗಳು ಹೂಳು ತೆಗೆಯುವುದಕ್ಕೆ ಸ್ಪಂದಿಸಬೇಕಿದೆ. ಈ ಬಗ್ಗೆ ಎರಡು ಸರ್ಕಾರಗಳು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕೆಂದು ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ತುಂಗಭದ್ರ ಜಲಾಶಯದಲ್ಲಿ ಹೂಳೆತ್ತುವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 64 ವರ್ಷಗಳಿಂದ ಜಲಾಶಯದಲ್ಲಿ 35 ಟಿ.ಸಿ.ಎಂ ಹೂಳು ತುಂಬಿಕೊಂಡಿದ್ದು, ರೈತರು ಪ್ರತಿ ವರ್ಷವು ಈ ರೀತಿ ಹೂಳು ಎತ್ತುವ ಕಾರ್ಯ ಹಮ್ಮಿಕೊಂಡು ವರ್ಷಕ್ಕೆ 1 ಟಿ.ಸಿ.ಎಂ ಹೂಳನ್ನು ತೆಗೆದರೆ ಏಷ್ಟೋ ಅನುಕೂವಾಗುತ್ತದೆ. ಸರ್ಕಾರದಿಂದ ಏನು ಸಹಾಯ ಸಹಕಾರ ಮಾಡಿಲಿಕ್ಕೆ ಸಾಧ್ಯವಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಿ ಮಾತನಾಡುತ್ತೇನೆ ಎಂದರು. ರಾಯಚೂರು, ಕೊಪ್ಪಳ, ಸಿಂಧನೂರಿನ ರೈತರ ಜೋತೆ ನಾನು ಈಗಾಗಲೇ ಈ ವಿಷಯದ ಬಗ್ಗೆ ಮಾತನಾಡಿದ್ದೇನೆ. ತುಂಗಾಭದ್ರ ಜಲಾಶಯದಲ್ಲಿ ಹೂಳೆತ್ತುವ ಜಾತ್ರೆಗೆ ನಾವು ಸಹ ಟ್ರ್ಯಾಕ್ಟರ್, ಟಿಪ್ಪರ್‌ಗಳನ್ನ ಕಳಿಸುತ್ತೇವೆ ಶಾಸಕರು ಭರವಸೆ ನೀಡಿದರು