ಇಸಿಪಿಎಲ್ ಕಾರ್ಖಾನೆ ಮುಚ್ಚಲು ಆಗ್ರಹ

347

ಬಳ್ಳಾರಿ/ ಕುಡಿತಿನಿ :  ಜೀವ ನಾಶಕ ಇಸಿಪಿಎಲ್ ಕಾರ್ಖಾನೆ ಮುಚ್ಚಲು ಆಗ್ರಹ-ಯಾವುದೇ ಕಾರಣಕ್ಕೂ ಜೆಎಸ್ ಡಬ್ಲೂ ಪೇಂಟ್ಸ್ ಕಾರ್ಖಾನೆ ಆರಂಭಿಸೋದು ಬೇಡ-ಕುಡಿತಿನಿಯಲ್ಲಿ ರೈತರ ಹಾಗೂ ಸಾರ್ವಜನಿಕರ ಆಗ್ರಹ-ಮುಂದುವರಿದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೆಕ್ಕಲಕೋಟೆ ಸ್ವಾಮೀಜಿ ಬೆಂಬಲ

ಬಳ್ಳಾರಿ ಜಿಲ್ಲೆಯ ಕುಡಿತಿನಿ ಬಳಿ ಆರಂಭಿಸಿರುವ ಜೀವನಾಶಕ ಇಸಿಪಿಎಲ್ ಕಾರ್ಖಾನೆ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಜೊತೆಗೆ ಜೆಎಸ್ ಡಬ್ಲೂ ಸಂಸ್ಥೆಯಿಂದ ಪೇಂಟ್ಸ್ ಸ್ಥಾವರ ಕೂಡ ನಿರ್ಮಾಣವಾಗುತ್ತಿದ್ದು ಅದನ್ನು ಯಾವುದೇ ಕಾರಣಕ್ಕೂ ಆರಂಭಿಸದಿರುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿದಿದೆ. ಕಳೆದ ಆರು ದಿನಗಳಿಂದ ಈ ಮುಷ್ಕರ ಹಮ್ಮಿಕೊಂಡಿದ್ದರೂ ಯಾವುದೇ ಒಬ್ಬ ಜನಪ್ರತಿನಿಧಿ ಇಲ್ಲಿ ಸುಳಿಯುತ್ತಿಲ್ಲ. ಜನಪ್ರತಿನಿಧಿಗಳು ಕಾರ್ಖಾನೆಯ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಕಾರ್ಮಿಕ ಮುಖಂಡ ಕಾಮೇಶ್ ಅವರ ನೇತ್ರತ್ವದಲ್ಲಿ ನಡೆಯುತ್ತಿರುವ ಮುಷ್ಕರ ಇಂದು ಕೂಡ ಮುಂದುವರಿದಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಬರೋವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ ಅಂತ ಮುಷ್ಕರ ನಿರತರು ಎಚ್ಚರಿಕೆ ನೀಡಿದ್ದಾರೆ.