ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ..

251

ಬಾಗಲಕೋಟೆ: ವಿದ್ಯಾರ್ಥಿ ಮೇಲೆ ನಾಲ್ವರು ಗೆಳೆಯರಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದದ ರಾಮವಾಡಿ ಕ್ರಾಸ್ ಬಳಿ ನಡೆದಿದೆ.ವಿದ್ಯಾರ್ಥಿ ಪ್ರದೀಪ್ ದಿವಟಗಿ ಹಲ್ಲೆಗೊಳಗಾಗಿ ಅಸ್ವಸ್ತಗೊಂಡು ಚಿಕಿತ್ಸೆ ಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ.ವಿಜಯಪೂರ ಜಿಲ್ಲೆಯ ಮುದೇಬಿಹಾಳ ತಾಲೂಕಿನ ನಾಗರಬೆಟ್ಟ ವಸತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಅದ್ಯಯನ ಮುಗಿಸಿ .ರಜೆ ಹಿನ್ನಲೆ ಹುನಗುಂದ ಪಟ್ಟಣಕ್ಕೆ ಪ್ರದೀಪ ಆಗಮಿಸಿದ .ಆದ್ರೆ ಪದೀಪ ನ್ನ ಯೋಗಕ್ಷೇಮ ವಿಚಾರಿಸಲೆಂದು  ಆಗಮಿಸಿದ  ನಾಲ್ವರು ಗೆಳೆಯರು ನಗರದ ಹೊರವಲಯದಲ್ಲಿ ಬರಲು ಪ್ರದೀಪನಿಗೆ ದೂರವಾಣೆ ಕರೆ ಮಾಡಿ.ನಂತರ ಪ್ರದೀಪನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಜಮೀನಯೊಂದರಲ್ಲಿ ಹಿಗ್ಗಾ ಮುಗ್ಗಾ ಥಳಿಸಿ ಆತನಿಗೆ ಬಾಯಿಯಲ್ಲಿ ಕ್ರೀಮಿನಾಶಕ  ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.ಹಲ್ಲೆಯಿಂದ ಪ್ರದೀಪ ತೀವ್ರ ಅಸ್ವಸ್ಥ ಗೊಂಡಿದ್ದರಿಂದ ನಾಲ್ವರು ಗೆಳೆಯರು ಯಾರು ಎಂಬುದು ತಿಳಿದು ಬಂದಿಲ್ಲ..ಈ ಕುರಿತು ಹುನಗುಂದ್ ಪಿಎಸ್ ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ.ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.