ಕಾಂಗ್ರೆಸ್ ಗೆ ಬಹಿರಂಗ ಸವಾಲ್ ಹಾಕಿದ ಮಾಜಿ ಸಿಎಂ ಜಗದೀಶ ಶೆಟ್ಟರ್.

429

ಬಾಗಲಕೋಟೆ:  ಕಾಂಗ್ರೆಸ್ ಗೆ ತಾಕತ್ತಿದ್ದರೆ ಸಿಎಂ ಅಭ್ಯಥಿ೯ ಘೋಷಿಸಲಿ, ಕಾಂಗ್ರೆಸ್ ಹೈಕಮಾಂಡಗೆ ಚಾಲೆಂಜ್ ಮಾಡಿದ್ರು ಮಾಜಿ ಸಿಎಂ ಜಗದೀಶ್ ಶೆಟ್ಟರ್.ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಮಾತನಾಡಿದ ಅವರುಬಿಜೆಪಿ ಸಿಎಂ ಅಭ್ಯಥಿ೯ಯಾಗಿ ಬಿಎಸ್ ವೈ ಅವರನ್ನ

ಘೋಷಿಸಿದೆ. ಆದ್ರೆ ಕಾಂಗ್ರೆಸ್ ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಲಿ ಎಂದ್ರು.ಇನ್ನು
ಮಾಜಿ ಸಿಎಂ ಕುಮಾರ ಸ್ವಾಮಿ ಹೋದಕಡೆಗೆಲ್ಲಾ ಮನೆ ಮಾಡೋದರ ಮೂಲಕ ಮತದಾರರ ಮನ ಗೆಲ್ಲಲು ಸಾಧ್ಯವಿಲ್ಲ.ಅವರು ಎಲ್ಲಿ ಸ್ಫಧೆ೯ ಮಾಡ್ತಾರೋ, ಬಿಡ್ತಾರೋ ಅನ್ನೋದು ಅವರ ಪಕ್ಷಕ್ಕೆ ಬಿಟ್ಟಿದ್ದು.ಇದ್ರಿಂದ ಬಿಜೆಪಿಗೆ ಯಾವುದೇ ತೊಂದರೆ ಇಲ್ಲ.
ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸಲು ಸಂಪೂಣ೯ ವಿಫಲರಾಗಿದ್ದಾರೆ.ಮುಂಬರುವ ಚುಣಾವಣೆಯಲ್ಲಿ ಕಾಂಗ್ರೆಸ್ ಗೆ ರೈತರೇ ತಕ್ಕ ಪಾಠ ಕಲಿಸುತ್ತಾರೆ ಎಂದ್ರು..