ಕೃಷಿ ಹೊಂಡದಲ್ಲಿ ಮೊಸಳೆ ಪ್ರತ್ಯಕ್ಷ

269

ನದಿ ಬರಿದಾದ ಕಾರಣ,ಬಿಸಿಲಿನ ತಾಪಕ್ಕೆ ಕೃಷಿಹೊಂಡ ಸೇರಿದ ಮೊಸಳೆ ..
.
ಬಾಗಲಕೋಟೆ /ಬಿಳಗಿ :ತಾಲುಕಿನ ಸೊನ್ನ ಗ್ರಾಮ.. ಬಿಸಲಿನ ತಾಪಕ್ಕೆ ಪ್ರಾಣ ಉಳಿಸಿಕೊಳ್ಳಲು ಮೊಸಳೆಯೊಂದು ನದಿ ದಡದ ಹೊಲದಲ್ಲಿರೋ ಕೃಷಿಹೊಂಡ ಸೇರಿರೋ ಘಟನೆ ಬಾಗಲಕೋಟೆ ಜಿಲ್ಲೆ ಬಿಳಗಿ ತಾಲುಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ..

ಬರದಿಂದ ಕೃಷ್ಣಾ ನದಿ ಬತ್ತಿಹೊದ ಪರಿಣಾಮ ಬಿಸಲಿನ ತಾಪದಿಂದ ರಕ್ಷಿಸಿಕೊಳ್ಳಲು ಗ್ರಾಮದ ಹಾಜೀಸಾಬ್ ಅವರ ಹೊಲದಲ್ಲಿದ್ದ ನೀರುತುಂಬಿದ ಕೃಷಿಹೊಂಡ ಸೇರಿದೆ..ಇನ್ನು ಕೃಷಿಹೊಂಡ ತಿಂಬಿದ್ದರಿಂದ ಮೊಸಳೆ ಅವಿತು ಕುಳಿತಿದೆ.ಹಾಜಿಸಾಬ್ ಸ್ಥಳಿಯರನ್ನ ಕರೆದು ಕೃಷಿಹೊಂಡ ಕಾಲಿ ಮಾಡಿ ಮೊಸಳೆಯನ್ನ ಹೊರತಗೆದು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರು ಮೊಸಳೆಯನ್ನ ಅರಣ್ಯಾಧಿಕಾರಿಗಳಿಗೆ ಜೀವಂತ ಒಪ್ಪಿಸಿದ್ದು, ಅರಣ್ಯಾಧಿಕಾರಿಗಳು ಮೊಸಳೆಯನ್ನ ಆಲಮಟ್ಟಿ ಹಿನ್ನಿರಿಗೆ ರವಾನಿಸಿದ್ದಾರೆ.

ಇನ್ನು ತಿವ್ರ ಬರದಿಂದ ಕೃಷ್ಣಾ ನದಿ ಬರಿದಾಗಿದ್ದು ನದಿಯಲ್ಲಿದ್ದ ಮೊಸಳೆಗಳು ನೀರಿಲ್ಲದ ಆಹಾರ ಅರಸಿ ನದಿ ಪಕ್ಕದ ಹೊಲಗಳಿಗೆ ನುಗ್ಗುತ್ತಿರೊದು ಸಾಮಾನ್ಯಾಗಿದೆ..