ಯಾರೂ ಇಲ್ಲದನ್ನು ಗಮನಿಸಿ ಮನೆ ದರೋಡೆ

299

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ವೆಂಕಟಗಿರಿ ಕೋಟೆ ಯಲ್ಲಿ ರಾತ್ರಿ ಕಳ್ಳತನವಾಗಿದೆ.ಆಟೋ ಡ್ರೈವರ್ ಬಾಬು ಮಕ್ಕಳ ಶಾಲೆರಜೆ ಇರೋದ್ದರಿಂದ ಅತ್ತೆ ಮನೆಗೆ ಅಂತ ಕೋಲಾರಕ್ಕೆ ಕುಟುಂಬದ ಸಮೇತ ಊರಿಗೆ ಹೋಗಿರುತ್ತಾರೆ .
ಹೋಗಿ 12 ದಿನ ಅಗಿದ್ದು .ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದು ರಾತ್ರಿ ವೇಳೆ ಕಳ್ಳರು ಮನೆಯನ್ನು ದೋಚಿ ಕಳ್ಳತನ ಮಾಡಿಕೊಂಡು ಹೋಗಿದ್ದರೆ ಎಂದು ಪಕ್ಕದ ಮನೆ ಅವರು ಮೊಬೈಲ್ ಫೋನ್ ಮುಖಾಂತರ ಬಾಬು ಅವರಿಗೆ ತಿಳಿಸಿತ್ತರೆ.

ಬಾಬು ರವರು ಬಂದು ನೋಡಿದಾಗ ಮನೆ ಯಲ್ಲಿ ಕಿವಿ ಒಲೆ,ಮಕ್ಕಳ ಐದು ಉಂಗುರ, ಬೆಳ್ಳಿ ಕಾಲು ಚೈನು ತಾಮ್ರದ ಹಂಡೆ, ಸೀರೆ, ಮತ್ತು 25 ಸಾವಿರ ಕ್ಯಾಶ್,25 ಗ್ರಾಂ ಚಿನ್ನ ಕಳ್ಳತನವಾಗಿದೆ ಎಂದು ಬಾಬು ತಿಳಿಸಿದ್ದಾರೆ.
ಚಿಂತಾಮಣಿ ನಗರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲೆಸಿಕೊಂಡಿದ್ದಾರೆ

ನಮ್ಮೂರ ಟಿವಿ ಇಮ್ರಾನ್ ಖಾನ್ ಅರ್ ಕೆ ಚಿಂತಾಮಣಿ.