ಲಾರಿ ಆಟೋ ಡಿಕ್ಕಿ.

491

ಬಳ್ಳಾರಿ / ಹೊಸಪೇಟೆ: ಲಾರಿಯೊಂದು ಆಟೋ(ಟಾಟಾಎಸಿ)ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 11 ಜನರು, ಗಾಯಗೊಂಡ ಘಟನೆ ತಾಲ್ಲೂಕಿನ ಚಿಲಕನಹಟ್ಟಿ ಗ್ರಾಮದ ರಾಷ್ಟ್ರ್ರೀಯ ಹೆದ್ದಾರಿ ಬಳಿ ಮಂಗಳವಾರ ಜರುಗಿದೆ.

ಕೂಡ್ಲಿಗಿ ತಾಲ್ಲೂಕಿನ ಕೈವಲ್ಲಾಪುರ ಗ್ರಾಮದ ನಿವಾಸಿಗಳಾದ ಸೀತಮ್ಮ(30), ಕೊಟ್ಲೇಶ(35), ಕಾವೇರಿ (12), ದುರ್ಗಮ್ಮ (18), ಅಜೇಯ (10), ಪವಿತ್ರ (15), ಲಕ್ಷ್ಮೀ (20), ಆನಂದ (35) ಹಾಗೂ ಪ್ರವೀಣ (7) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಚಿಂತಜನಕವಾಗಿದೆ.

ಕೈವಲ್ಲಾಪುರ ಗ್ರಾಮದಿಂದ ಮುನಿರಬಾದ್(ಹುಲಿಗಿ ಕ್ಷೇತ್ರ)ಗೆ ಪ್ರಯಾಣ ಬೆಳಿಸಿದ್ದು, ಮಾರ್ಗ ಮಧ್ಯದಲ್ಲಿ (ಚಿಲಕನಹಟ್ಟಿ ಗ್ರಾಮ)ಅತಿ ವೇಗದಿಂದ ಬಂದ ಲಾರಿ ಟಾಟಾ ಎಸಿ ವಾಹನವನ್ನು ಡಿಕ್ಕಿ ಹೊಡದಿದೆ. ಹೊಸಪೇಟೆ ಬಡಾವಣೆ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದರು.