ಕೆರೆ ಅಂಗಳದ ಅಕ್ರಮ ಶೆಡ್ಗಳ ತೆರವು

306

ಬೆಂಗಳೂರು/ಮಹದೇವಪುರ:- ವರ್ತೂರು ಕೆರೆ ಪ್ರದೇಶದ ರಾಜಕಾಲುವೆಯಲ್ಲಿ ಕಸಕ್ಕೆ ಬೆಂಕಿ ಹೊತ್ತಿಕೊಂಡು ಮಾದ್ಯಮಗಳಲ್ಲಿ ಭಾರಿ ಸುದ್ದಿಯಾದ್ದರಿಂದ ಏಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಇಂದು ಕೆರೆಯಲ್ಲಿ ಕಸ ಉತ್ಪತ್ತಿ ಯಾಗಲು ಕಾರಣರಾಗಿದ್ದ ಬಾಂಗ್ಲಾ, ಪಚ್ಚಿಮ ಬಂಗಾಳ ಪ್ರಜೆಗಳನ್ನು ಶೆಡ್ಗಳನ್ನು ತೆರವು ಗೊಳಿಸಿ ಕೆರೆ ಅಭಿವೃದ್ದಿಗೆ ಮುಂದಾಗಿದ್ದಾರೆ.

ಮಹದೇವಪುರ ಬಿಬಿಎಂಪಿ ಜಂಟಿ ಆಯುಕ್ತೆ ವಾಸಂತಿ ಅಮರ್ ನೇತೃತ್ವದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಶೇಡ್ಗಳ ಸಮೇತ ತೆರವು ಗೊಲೀಸುತ್ತಿರುವ ದೃಶ್ಯಗಳು ಕಂಡು ಬಂದದ್ದು ಮಾರತ್ತಹಳ್ಳಿ ಸಮೀಪದ ತೂಬರಹಳ್ಳಿಯಲ್ಲಿ. ಇಲ್ಲಿನ ಅಮಾನಿ ಕೆರೆಯಲ್ಲಿ ಬಾಂಗ್ಲಾ ದೇಶದಿಂದ ಬಂದು ಚಿಂದಿ ಆಯ್ದು ಕೊಂಡು ನೆಲೆಸಿದ್ದ ಬಾಂಗ್ಲಾ ಪ್ರಜೆಗಳು ತ್ಯಾಜ್ಯ ಕಸವನ್ನು ವರ್ತೂರು ಕೆರೆಗೆ ಸುರಿದು ಕಲುಷಿತ ಗೊಳಿಸುತ್ತಿದ್ದರು. ಇದರಿಂದಾಗಿ ನಿನ್ನೆ ವರ್ತೂರು ಕೆರೆಗ ಹೊಂದಿಕೊಂಡಿರುವ ವಳಗೆರೆ ಗ್ರಾಮದ ರಾಜಕಾಲುವೆಯಲ್ಲಿ ಸಂಗ್ರಹವಾಗಿದ್ದ ಕಸಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಮಾದ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇದರಿಂದ ಏಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಬಾಂಗ್ಲಾ ಪ್ರಜೆಗಳನ್ನು ಎತ್ತಂಗಡಿ ಮಾಡಿಸಿದ್ದಾರೆ.

ಬೈಟ್: ಡಾ. ವಾಸಂತಿ ಅಮರ್, ಮಹದೇವಪುರ ಜೆಸಿ.
ಇನ್ನು ಬೆಂಗಳೂರಿನ ಮಾರತ್ತಹಳ್ಳಿ, ಪಣತ್ತೂರು, ತೂಬರಹಳ್ಳಿ, ಬೆಳ್ಳಂದೂರು, ವತರ್ೂರು ಮುಂತಾದ ಪ್ರದೇಶಗಳಲ್ಲಿ ಸಾವಿರಾರು ಬಾಂಗ್ಲಾ ಪ್ರಜೆಗೆಳು ಖಾಸಗಿಯರವ ಖಾಲಿ ಜಾಗವನ್ನು ಬಾಡಿಗೆಗೆ ಪಡೆದು ಶೆಡ್ಗಳನ್ನು ನಿರ್ಮಿಸಿಕೊಂಡು ಚಿಂದಿ ಆಯ್ದುಕೊಂಡು ಜೀವನ ನಡೆಸುತ್ತಿದ್ದರು. ಇವರು ಆಯ್ದುಕೊಂಡು ಬಂದ ಚಿಂದಿ ಕಸದಲ್ಲಿನ ತ್ಯಾಜ್ಯವನ್ನು ವರ್ತೂರು, ಬೆಳ್ಳಂದೂರು ಕೆರೆಗಳಿಗೆ ಬಿಸಾಡುತ್ತಿದ್ದರಿಂದ ಕೆರೆ ಮತ್ತಷ್ಟು ಕಲುಷಿತ ಗೊಳ್ಳಲು ಕಾರಣವಾಗಿದ್ದು, ಇಂದು ಬೇಟಿ ನೀಡಿದ ಅಧಿಕಾರಿಗಳು ಬಾಂಗ್ಲ ಪ್ರಜೆಗಳ ಬಳಿಯಿದ್ದ ಗುರುತಿನ ಚೀಟಿ, ಆದಾರ್ ಕಾರ್ಡುಗಳನ್ನು ಪರಿಶೀಲಿಸಿ ಮಾನವೀಯತೆ ದೃಷ್ಟಿಯಿಂದ ಎರಡು ದಿನಗಳ ಕಾಲ ಕಾಲಾವದಿ ನೀಡಿದ್ದು ಕೆರೆ ಸುತ್ತಮುತ್ತಲ ಪ್ರದೇಶದಿಂದ ಜಾಗ ಕಾಲಿಮಾಡುವಂತೆ ಸೂಚಿಸಿದ್ದಾರೆ.
ಒಟ್ಟಾರೆ ಊರು ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಮುಚ್ಚಿದರು ಎಂಬಂತೆ ಇಷ್ಟು ದಿನಗಳ ಕಾಲ ಸುಮ್ಮನಿದ್ದ ಅಧಿಕಾರಿಗಳು ಇದೀಗ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡು, ಕೆರೆ ಪ್ರದೇಶದಲ್ಲಿನ ಕಸಕ್ಕೆ ಬೆಂಕಿ ಬಿದ್ದ ನಂತರ ಇದಕ್ಕೆ ಕಾರಣರಾದವರ ವಿರುದ್ದ ಕ್ರಮ ಜರುಗಿಸಲು ಮುಂದಾಗಿದ್ದು ಈ ಕಾರ್ಯವನ್ನು ಪೂರ್ಣ ಗೊಳಿಸುತ್ತಾರಾ ಎಂಬುದನ್ನು ಕಾದು ನೋಡ ಬೇಕಿದೆ.