ಗ್ರಾಮಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ

360

ಬೆಂಗಳೂರು/ಮಹದೇವಪುರ:- ಬೆಂಗಳೂರು ನಗರ ಜಿಲ್ಲೆ  ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ 2017-18ರ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಸ್ಥಳೀಯ ಶಾಸಕರಾದ ಅರವಿಂದ ಲಿಂಬಾವಳಿ ಅಹ್ವಾನಿಸದೇ ಶಿಷ್ಟಾಚಾರ ಮೀರಲಾಗಿದೆ ಎಂದು ಬಿಜೆಪಿ ಜಿ,ಪಂ ಮತ್ತು ತಾ.ಪಂ ಗ್ರಾ.ಪಂ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ನಂತರ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣ ಸ್ವಾಮಿ ಸರ್ಕಾರಿ ಯೋಜನ ೆಗಳಲ್ಲಿನ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಅರಿವು ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ಕಡ್ಡಾಯವಾಗಿ ಮಾಡಬೇಕೆಂದು ಗ್ರಾಮೀಣಾ ಭಾಗದ 29 ಇಲಾಖೆಗಳಲ್ಲಿ ಜನರಿಗೆ ಅಗತ್ಯ ಯೋಜನೆಗಳನ್ನು ಸರ್ಕಾರ ನೀಡಿದ್ದರೂ ನಾನಾ ಕಾರಣಗಳಿಂದ ಅರ್ಹ ಪಲಾನುಭವಿಗಳಿಗೆ ದೂರೆಯದಿರುವುದು ಬೇಸರ ಸಂಗತಿ.

ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿನ ಸೌಲಭ್ಯಗಳನ್ನು ಜನರಿಗೆ ಪ್ರಚಾರ ಪಡಿಸುವ ಮೂಲಕ ಯೋಜನೆಗಳ  ಬಗ್ಗೆ ಅರಿವು ಮೂಡಿಸಬೇಕು.

ಗ್ರಾಮಸಭೆಗಳಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಯೋಜನೆ ಮತ್ತು ಅದರ ಕಾರ್ಯವೈಕಾರಿಯ ತಿಳಿದುಕೊಳ್ಳಬೇಕು, ಅಲ್ಲದೆ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ನೇರವಾಗಿ ಹಂಚಿಕೊಂಡು ಶೀಘ್ರ ಪರಿಹಾರ ಕಂಡುಕೊಳ್ಳಿಸಬೇಕೆಂದರು ಇದೇ ವೇಳೆ ಮಾತನಾಡಿದ ಅವರು ಬಿಜೆಪಿ ಜನಪ್ರತಿನಿದಿಗಳು ವಿನಾಕಾರಣ ಸಭೆಯಿಂದ ಹೊರ ಹೋಗಿದ್ದಾರೆಂದರು.

ನಾರಾಯಣಸ್ವಾಮಿ ವಿಧಾನ ಪರಿಷತ್ ಸದಸ್ಯರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಯುವ ಘಟಕದ ಮಾಜಿ ಅಧ್ಯಕ್ಷ ರಿಜ್ವಾನ್ ಅರ್ಷದ್ ನನ್ನ ವಿರುದ್ದ ವಿನಾಕಾರಣ ಆರೋಪಗಳು ಮಾಡುತ್ತಿದ್ದಾರೆ, ನನಗೆ ರಾಜ್ಯ ಉತ್ಸುವಾರಿ ವೇಣುಗೋಪಾಲ್ ರವರು ಯಾವುದೇ ರೀತಿಯಲ್ಲಿ ಎಚ್ಚರಿಕೆ ನೀಡಿಲ್ಲ, ಅಲ್ಲದೆ ಈ ಹಿಂದಿನ ಅವದಿಯಲ್ಲಿ ಏನು ನಡೆದಿದೆ ಎಂಬ ಬಗ್ಗೆ ಪರಿಶೀಲನೆ ಮಾಡಲು ಅವರು ಬಂದಿಲ್ಲ ಎಂದರು.

ರಿಜ್ವಾನ್ ಅರ್ಷದ್ ಮಾಜಿ ಅಧ್ಯಕ್ಷರು ಕೆಪಿಸಿಸಿ ಯುವ  ಘಟಕ .

ಗ್ರಾಮ ಸಬೆಯನ್ನು ಬಹಿಷ್ಕರಿಸಿ  ಹೊರ ನಡೆದು  ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಗಣೇಶ್ ಕ್ಷೇತ್ರ ಶಾಸಕರಿಗೆ ಸಿಷ್ಟಾಚಾರದನ್ವಯ ಸಭೆಗೆ ಆಹ್ವಾನಿಸಿಲ್ಲ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರನ್ನೂ ಸಹ ಕಡೆಗಣಿಸಲಾಗಿದ್ದು, ಸಭೆಯಲ್ಲಿ ಕೂರಲು ಖುಚರ್ಿಗಳನ್ನು ಇರಿಸದೆ ಅಗೌರವ ತೋರಿದ್ದಾರೆಂದು ದೂರಿದರು. ಶಾಸಕರು ಚಾಲನೆ ನೀಡಿರುವ ಆರ್ಓ ಪ್ಲ್ಯಾಂಟನ್ನು ರಾಜಕೀಯ ದಳ್ಳುರಿಯಿಂದಾಗಿ ಅಭಿವೃದ್ಧಿಗೊಳಿಸದೆ ನಿಲ್ಲಿಸಲಾಗುತ್ತಿದೆ, ಗ್ರಾಮಸಭೆಯನ್ನು ಕಾಂಗ್ರೇಸ್ ಪಕ್ಷದ ಸಭೆಯನ್ನಾಗಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಗಣೇಶ್ ಬಿದರಹಳ್ಳಿ ಜಿಲ್ಲಾ ಪಂಚಾಯತಿ ಸದಸು.

ಶಿಷ್ಟಾಚಾರದ ಅನ್ವಯ ಅಧಿಕಾರಿಗಳು ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇವೆ, ಸಭೆ ಗೊತ್ತುಪಡಿಸಿದ್ದ ದಿನಾಂಕಕ್ಕೆ ಬದಲಿ ದಿನದಂದು ಸಭೆ ಏರ್ಪಡಿಸಲು ಶಾಸಕರು ತಿಳಿಸಿದ್ದರು, ನಗರ ಜಿಲ್ಲಾ ಪಂಚಾಯಿತಿಯ ತೀಮರ್ಾನದಂತೆ ಸಭೆಯ ನಡೆಯುವುದು ಖಚಿತವಾಗಿದ್ದು,

ಶಾಸಕರು ಗೈರಾಗಿದ್ದಾರೆ, ಇದನ್ನೇ ರಾಜಕೀಯ ದಳ್ಳುರಿ ಎಂದು ಬಿಂಬಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ ರಾಜೇಶ್ ತಿಳಿಸಿದ್ದಾರೆ.

ಬಿ.ಜಿ ರಾಜೇಶ್ .ಉಪಾಧ್ಯಕ್ಷ  ಬಿದರಹಳ್ಳಿ ಗ್ರಾಮ ಪಂಚಾಯಿತಿ ,..

ಈ ಮದ್ಯೆ ಅಂಗನವಾಡಿ ಕಾರ್ಯಕರ್ತಯೊಬ್ಬರು ಸಭೆಗೆ ಆಗಮಿಸಿದ್ದ ವಿಧಾನಪರಿಷತ್ ಸದಸ್ಯರ ಮುಂದು ಕಣ್ಣೀರಿಟ್ಟರು, ನನಗೆ ಗ್ರಾಮ ಸಭೆಯಿಂದ ಅನ್ಯಾಯ ಆಗಿದೆ ನ್ಯಾಯ ದೊರಕಿಸಿಕೊಡಿ ಎಂದು ತನ್ನ ಅಳಲು ತೋಡಿಕೊಂಡರು. ಈ ಹಿಂದೆ ಗ್ರಾಮ ಪಂಚಾಐತಿ ವತಿಯಿಂದ ನೀಡಲಾದ ನಿವೇಶನವನ್ನು ಇದೇ ಗ್ರಾಮ ಪಂಚಾಯತಿ ಸದಸ್ಯೆ ಗಂಗಮ್ಮ ಎಂಬುವವರು ದೌರ್ಜನ್ಯ ಮಾಡಿ ಕಸಿದುಕೊಂಡಿದ್ದಾರೆ, ನನಗೆರ ನ್ಯಾಯ ಕೊಡಿಸಿ ಎಂದು ಅಂಗಲಾಚಿದರು.

ಬೈಟ್; ಮಾತಾರ್ ನಿವೇಶನ ಕಳೆದುಕೊಂಡ ಅಂಗನವಾಡಿ ಕಾರ್ಯಕತరు

ಅದೇನೇ ಆಗಲಿ ತೀವ್ರ ಬರಗಾಲದಿಂದ ಬಳಲುತ್ತಿರುವಾಗ ಜನರ ಅಭಿವೃದ್ದಿಗೆ ಶ್ರಮಿಸ ಬೇಕಿರುವ ಜನಪ್ರತಿನಿದಿಗಳು  ಶೀಷ್ಟಾಚಾರದ ಹೆಸರಿನಲ್ಲಿ ಕಿತ್ತಾಟಕ್ಕೆ ಮುಂದಾಗಿರುವ ಗ್ರಾಮ ಸಭೆಯನ್ನು ಬಹಿಷ್ಕರಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾದರು, ಇನ್ನಾದರೂ ರಾಜಕೀಯ ಬದಿಗೊತ್ತಿ ಸಾರ್ವಜನಿಕರ ಮೂಲಭೂತ ಸಮಸ್ಯೆಗಳತ್ತ ಗಮನಹರಿಸಲಿ.