ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ

298

ಬಳ್ಳಾರಿ:ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿಕೆ- ೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ.ಪಕ್ಷದ ಯಾವ ಜವಾಬ್ದಾರಿ ಕೊಟ್ಟರು ನಿರ್ವಹಿಸುತ್ತೇನೆ. ಚುನಾವಣೆಗೆ ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಉದ್ಭವವಾಗಿಲ್ಲ ಈ ಸಲ ಬಿಜೆಪಿ ಸರಕಾರ ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಲಿದೆ. ಅವರೇ‌ ನಮ್ಮ ಮುಂದಿನ ಸಿಎಂ. ಪಕ್ಷ ಜವಾಬ್ದಾರಿ ನಿಡಿದ್ದನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ,ಈಗಾಗಲೇ ನಾನಾ ಕಡೆ ಪ್ರವಾಸ ಮಾಡಿರುವೆ, ಪಕ್ಷ ಸಂಘಟನೆಗೆ ಒತ್ತು ನೀಡುವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಾಧಾನಿ ಮೋದಿಯವರೇ ಮತ್ತೆ ಪ್ರಧಾನಿಯಾಗ್ತಾರೆ. ಅವರ ಗೆಲುವಿಗೆ ನನ್ನ ಶಕ್ತಿ ಮೀರಿ ಕೆಲಸ ಮಾಡುವೆ. ಕರ್ನಾಟಕ ಸೇರಿದಂತೆ, ಆಂಧ್ರಪ್ರದೇಶದ, ತೆಲಂಗಾಣದಿಂದಲೂ ಸಂಸದರನ್ನು ಗೆಲ್ಲಿಸುವ ಯತ್ನ ಮಾಡುವೆ- ವಿವಾಹ ವಾರ್ಷಿಕೋತ್ಸವ ನಿಮಿತ್ತ ಬಳ್ಳಾರಿ ಗೆ ಬಂದಿದ್ದೇನೆ- ಕುಟುಂಬ ಸಮೇತರಾಗಿ ಆಗಮಿಸಿದ್ದೇವೆ- ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ವಿಶೇಷ ಪೂಜೆಗೆ ಆಗಮಿಸಿದ್ದ ರೆಡ್ಡಿ- ಬಳ್ಳಾರಿಯಲ್ಲಿ ಹೇಳಿಕೆ ನೀಡಿದ ರೆಡ್ಡಿ
ಮಾಜಿ ಸಚಿವ ಜನಾರ್ದನ ರೆಡ್ಡಿ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ – ರೆಡ್ಡಿ ಮತ್ತು ಅವರ ಕುಟುಂಬಕ್ಕೆ ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ, ಪೂಜೆ ಪತ್ನಿ ಅರುಣಾ ಲಕ್ಷ್ಮಿ, ಮಗ ಕಿರೀಟಿ, ಮಗಳು ಬ್ರಹ್ಮಿಣಿ, ಅಳಿಯ ರಾಜೀವ್ ಸೇರಿದಂತೆ ಕುಟುಂಬದ ಸದಸ್ಯರು ಆಗಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆಡಸಲಾಯಿತು.