ಪ್ಲಾಸ್ಟಿಕ್ ಮಾರಟ ಅಂಗಡಿಗಳ ಮೇಲೆ ದಾಳಿ.

647

ಬಳ್ಳಾರಿ /ಹೊಸಪೇಟೆ:ಪ್ಲಾಸ್ಟಿಕ್ ಬಳಕೆ ಹಾಗೂ ಮಾರಟವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳು, ನಗರದ ಪ್ಲಾಸ್ಟಿಕ್ ಮಾರಟ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿ, ಸಾವಿರಾರು ರೂ. ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯತ್ರಂಣ ಮಂಡಳಿ ಪರಿಸರ ಅಧಿಕಾರಿ ಮಂಜುನಾಧ ಹಾಗೂ ನಗರಸಭೆ ಪರಿಸರ ಅಭಿಯಂತರೆ ಶಿಲ್ಪಶ್ರೀ ನೇತೃತ್ವದಲ್ಲಿ ನಗರದ ರಾಣಿಪೇಟೆಯ ಎಸ್‌ವಿಕೆ ಬಸ್ ನಿಲ್ದಾಣದ ಬಳಿ ಇರುವ ರಾಜೇಶ್ವರಿ ಪ್ಲಾಸ್ಟಿಕ್ಸ್, ಡ್ಯಾಂ ರಸ್ತೆಯ ರಾಜಕೃಪ ಮಾರ್ಕೆಟಿಂಗ್ ಹಾಗೂ ಕಾಲೇಜು ರಸ್ತೆಯಲ್ಲಿರುವ ಲಕ್ಷ್ಮೀ ಸ್ಟಿಕರ್ಸ್‌ ಅಂಗಡಿಗಳ  ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಅಂಗಡಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ಪ್ಲಾಸ್ಟಿಕ್ ಕಪ್ಪು, ತಟ್ಟೆ, ಬ್ಯಾಗ್ ಸೇರಿದಂತೆ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವಾರವಷ್ಟೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ಲಾಸ್ಟಿಕ್ ಮಾರಟ, ಪ್ಲೆಕ್ಸ್ ಮುಂತಾದ ಪ್ಲಾಸ್ಟಿಕ್ ವಸ್ತುಗಳನ್ನು ಮಾರಟ ಮಾಡಲು ಕಳೆದ ಮೇ 31ವರಗೆ ಗಡುವು ನೀಡಿತ್ತು. ಆದರೂ, ಕೆಲ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಟ ಮಾಡುವುತ್ತಿರುವುದನ್ನು ಅರಿತ ನಗರಸಭೆ ಪರಿಸರ ಅಧಿಕಾರಿಗಳು, ನಗರದಲ್ಲಿ ಪ್ಲಾಸ್ಟಿಕ್ ಅಂಗಡಿಗಳ ಮೇಲಿನ ದಾಳಿಯನ್ನು ಚುರುಕುಗೊಳಿಸಿದ್ದು, ಇನ್ನುಳಿದ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ.