ಮೋದಿ ಫೆಸ್ಟ್ ಪ್ರಚಾರ ವಿಫಲ.

233

ರಾಯಚೂರು.ಕೇಂದ್ರ ಸರಕಾರದ ಯೋಜನೆಗಳ ಪ್ರಚಾರ ಮಾಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮ ಪ್ರಚಾರ ಕೊರತೆ ಮತ್ತು ಅಧಿಕಾರಿಗಳ ಸಮನ್ವಯತೆ ಕೊರತೆಯಿಂದಾಗಿ ಮೊಟಕುಗೊಳ್ಳುವಂತಾಗಿರುವುದು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಗುರಿಯಾಗಿದೆ.

ಕೇಂದ್ರ ಸರಕಾರಕ್ಕೆ ೩ ವರ್ಷ ತುಂಬಿದ ಸಾಧನೆಗಳ ಕುರಿತು ಇಂದು ರಾಜ್ಯಾದ್ಯಂತ ೭ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮ ಅಧಿಕಾರಿಗಳ ಸಹಕಾರ ಕೊರತೆಯಿಂದಾಗಿ ಜನರಿಲ್ಲದೆ ಕಾಲಿ ಕುರ್ಚಿಗಳು ಎದ್ದು ಕಾಣುತ್ತಿರುವುದು ಆಯೋಜಕರ ತೀರ್ವ ಆಕ್ಷೆಪಕ್ಕೆ ಎಡೆಮಾಡಿತು.
ಮೂರು ದಿನಗಳ ಕಾಲ ನಡೆವ ಮಹತ್ವಾಕಾಂಕ್ಷಿ ಮೋದಿ ಫೆಸ್ಟ್ ಗೆ ಉಧ್ಘಾಟಕರೇ ಆಗಮಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿ, ಪ್ರಚಾರದ ಕೊರತೆ, ಜನರೇ ಇಲ್ಲದಂತಾಗಿ ಫೆಸ್ಟ್ ಕಾರ್ಯಕ್ರಮ ವಿಫಲವಾಗುವಂತಾಯಿತು.

ರಾಜ್ಯದದಲ್ಲಿ ೭ ಜಿಲ್ಲೆಯಲ್ಲಿ ಅದ್ದೂರಿಯಾಗಿ ಚಾಲನೆ ಕಂಡರೆ ಜಿಲ್ಲೆಯಲ್ಲಿ ಮಾತ್ರ ಯಾರೂ ಇಲ್ಲದೇ ಬಿಕೋ ಎನ್ನುತ್ತಿತ್ತು.