ಡಬ್ಬಣ ದಿಂದ ತಿವಿದು ವ್ಯಕ್ತಿ ಕೊಲೆ!

238

ರಾಯಚೂರು: ಚೀಲ ಹೊಲೆಯುವ ಡಬ್ಬಣದಿಂದ ತಿವಿದು ವ್ಯಕ್ತಿ ಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿ ನಗರದ ಮೈಲಾರಿ ನಗರದ ನಿವಾಸಿ ತಿಮ್ಮಪ್ಪ (೪೮) ಎಂದು ಗುರುತಿಸಲಾಗಿದ್ದು ಕೊಲೆ ಮಾಡಿದ ವ್ಯಕ್ತಿ ತಿರುಮಲ್ಲೇಶ ಎಂದು ತಿಳಿದುಬಂದಿದೆ.

ನಗರದ ಎಪಿಎಂಸಿಯ ರೈತ ಭವನದ ಹತ್ತಿರ ಘಟನೆ ಸಂಬವಿಸಿದೆ.ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.