ಮಹಾಲಕ್ಷ್ಮಿ ಜಾತ್ರೆಗೆ ಅದ್ದೂರಿ ತೆರೆ..

380

ಬಾಗಲಕೋಟೆ/ಜಮಖಂಡಿ : ತಾಲೂಕಿನ ಮಧುರಖಂಡಿ ಗ್ರಾಮದೇವತೆ ಮಹಾಲಕ್ಷ್ಮಿ ದೇವಿಯ ಜಾತ್ರೆಗೆ ಅದ್ದೂರಿಯಾಗಿ ಇಂದು ತೆರೆ ಬಿದ್ದಿತು. 12 ವರ್ಷಕ್ಕೊಮ್ಮೆ 7 ದಿನಗಳ ಕಾಲ ನಡೆಯುವ ಜಾತ್ರೆ ಕೊನೆದಿನವಾದ ಇಂದು ಮಹಾಲಕ್ಷ್ಮಿ ದೇವಿಯ ಪಲ್ಲಕ್ಕಿ ಉತ್ಸವದೊಂದಿಗೆ ತೆರೆ ಬಿದ್ದಿತು. ಗ್ರಾಮದೇವತೆ ಪಲ್ಲಕ್ಕಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ದೇವಿಯ ಉತ್ಸವ ಕಣ್ಣು ತುಂಬಿಕೊಂಡ್ರು.ಪಲ್ಲಕ್ಕಿ ಉತ್ಸವದಲ್ಲಿ ಮಹಾಲಕ್ಷ್ಮಿ ದೇವಿಯ ಬೆಳ್ಳಿ ಪಲ್ಲಕ್ಕಿಗೆ ಭಕ್ತರು ಬಾಳೆಹಣ್ಣು ಎಸೆದು  ಹರಿಕೆ ಸಮರ್ಪಿಸಿದ್ರು.