ಸಾವಿರ ಗಿಡ ಬೆಳೆಸಿದ ಮಾದರಿ ಪರಿಸರ ಪ್ರೇಮಿ

424

ಬಳ್ಳಾರಿ/ ಹೊಸಪೇಟೆ: ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಗಿಡ ಮರಗಳ ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಬೇಕ ಎಂಬ ಆಶಯದೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಎರೆಡು ಎಕರೆ ಪ್ರದೇಶದಲ್ಲಿ ಒಂದು ಸಾವಿರ ೬೦ಕ್ಕೂ ಅಧಿಕ ಜಾತಿಯ ಕಾಡು ಗಿಡಗಳನ್ನು ಬೆಳಸಿದ ಪರಿಸರ ಪ್ರೇಮಿ ನಮ್ಮ ಮದ್ಯ ಇದ್ದಾನೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಕಮಲಾಪುರದ ಪಂಪಯ್ಯ ಸ್ವಾಮಿ, ಓದಿದ್ದು ಡಿಪ್ಲೊಮೋ ಮೆಕಾನಿಕಲ್ ಇಂಜನೀಯರಿಂಗ್, ಓದಿನ ನಂತರ ೧೦ ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೈ ತುಂಬ ಸಂಬಳದ ನೌಕರಿ, ಆದರೆ ಅದು ನೆಮ್ಮದಿ ತರಲಿಲ್ಲವೆಂದು ರಾಜೀನಾಮೆ.
ಕಮಲಾಪುರದಲ್ಲಿದ್ದು ಸ್ಟೇಷನರಿ ಶಾಪ್ ತೆಗೆದು ಜೀವನ ನಡೆಸುತ್ತಿದ್ದ. ಸಾರ್ವಜನಿಕರ ಸೇವೆ ಆಸಕ್ತಿಯಿಂದ ಸ್ಥಳೀಯ ಪಟ್ಟಣ ಪಂಚಾಯ್ತಿ ಸದಸ್ಯ, ಅಧ್ಯಕ್ಷನಾಗಿ ಸೇವೆ. ಅಲ್ಲಿನ ರಾಜಕೀಯ ಮತ್ತು ಭ್ರಷ್ಟತೆಗೆ ಬೇಸರಗೊಂಡು ಆ ಕ್ಷೇತ್ರ ದಿಂದಲೂ ದೂರವಾದರು.

ಆಗ ಇವರನ್ನು ಆಕರ್ಷಿಸಿದ್ದು ಪೋಟೋಗ್ರಫಿ. ಹತ್ತಿರದ ಕರಡಿಧಾಮ, ಐತಿಹಾಸಿಕ ಹಂಪಿ ಸೇರಿಂದತೆ ಸುತ್ತಮುತ್ತಲ ಪರಿಸರದ ಛಾಯಾಚಿತ್ರಕರಣದ ಜೊತೆ, ಪಕ್ಷಿ ವೀಕ್ಷಕರಾದರು. ನೂರಾರು ಪಕ್ಷಿಗಳ, ಪ್ರಾಣಿಗಳ ವಿಭಿನ್ನ ಶೈಲಿಯ ಪೋಟೋಗಳನ್ನು ತೆಗೆದರು. ಇದು ಅವರಿಗೆ ಖಷಿ ನೀಡಿತು. ಹಾವು ಹಿಡಿಯುವದನ್ನು ಕಲಿತ ಇವರು ಪಟ್ಟಣದಲ್ಲಿ ಕಂಡು ಬರುವ ನೂರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟರು. ಕಾಡು. ಪಕ್ಷಿ. ಪ್ರಾಣಿಗಳ ತಮ್ಮ ಛಾಯಾಚಿತ್ರ ಪ್ರದರ್ಶನ ನಡೆಸಿದರು. ವೈಲ್ಡ್ ಲೈಫ್ ಪೋಟೋಗ್ರಾಫರ್ ಮತ್ತು ಮಾರ್ಗದರ್ಶಕರಾದರು.

ಪರಿಸರ, ಪ್ರಾಣಿ, ಪಕ್ಷಿ ಸಂಕುಲದ ಬಗ್ಗೆ ಶಾಲಾ ಕಾಲೇಜು ಮಕ್ಕಳಿಗೆ ಉಪನ್ಯಾಸ ನೀಡಿದರು ಆಗ ಮಕ್ಕಳು ನೀವೆಲ್ಲಿ ಪರಿಸರ ಸಂರಕ್ಷಣೆ ಮಾಡಿದ್ದೀರಿ ಎಂಬ ಪ್ರಶ್ನೆ ಅವರನ್ನು ಈ ಗಿಡ ಮರಗಳ ಸಂರಕ್ಷಣೆಗೆ ಪ್ರೇರಣೆ ನೀಡಿತು.

ಕಳೆದ ಮೂರು ವರ್ಷಗಳ ಹಿಂದೆ ಒಂದು ಎಕರೆ ಬರಡು ಜಮೀನು ಖರೀದಿಸಿದರು. ಪಕ್ಕದಲ್ಲಿಯೇ ಇದ್ದ ಮತ್ತೊಂದು ಎಕರೆ ತುಂಗಭದ್ರ ಮಂಡಳಿ ಜಮೀನನ್ನು ಗುರುತಿಸಿಕೊಂಡು ಅಲ್ಲಿ ಗಿಡಗಳನ್ನು ನಡೆಲು ಮುಂದಾರು. ಇದೀಗ ಇಲ್ಲಿ ಆಲ, ಅರಳಿ, ಆಶೋಕ, ಉಣಸೆ, ಬೇವು, ಕರಿಬೇವು, ಪೇರಲ, ಬಾರೆ, ಸಿಹಿ ಉಣಸೆ, ಸೀತಾಫಲ, ಬಾದಮಿ, ಪಪ್ಪಾಯ, ಮೊದಲಾದ ಕಾಡು ಜಾತಿಯ ಮತ್ತು ತೋಟಗಾರಿಕೆಯ ಗಿಡಗಳನ್ನು ನೆಟ್ಟರು. ಪಕ್ಕದಲ್ಲಿಯೇ ಹರಿಯುವ ತುಂಗಭದ್ರ ಕಾಲುವೆಯ ಬಸಿ ನೀರು ದೊರೆಯುತ್ತದೆ. ಕಾಲುವೆಯಲ್ಲಿ ನೀರು ಇಲ್ಲದಾಗ ಪಕ್ಕದ ಜಮೀನು ಹೊಂದಿರುವ ಸ್ನೇಹಿತ ಇವರ ಕೆಲಸಕ್ಕೆ ಮನಸೋತು ಬೋರ್ ವೆಲ್ ನೀರು ನೀಡಿದ್ದಾರೆ.ನ

ೀರಿನ ಉಳಿತಾಯಕ್ಕೆ ಮತ್ತು ಗಿಡಗಳನ್ನು ಚೆನ್ನಾಗಿ ಬೆಳೆಯಲು ಹನಿ ನಿರಾವರಿ ವ್ಯವಸ್ಥೆ ಮಾಡಿದ್ದಾರೆ. ಗಿಡಗಳಿಂದ ಉದುರುವ ಎಲೆಗಳನ್ನೇ ಸಾವಯುವ ಗೊಬ್ಬರವಾಗಿ ಮಾಡಿ ಬಳಸುತ್ತಾರೆ. ಹೀಗೆ ಕಲ್ಲುಗಳಿಂದ ಕೂಡಿದ್ದ ಜಮೀನು ಈಗ ಇಂತಹ ಬೇಸಿಗೆಯ ದಿನಗಳಲ್ಲೂ ಹಚ್ಚ ಹಸಿರಿನ ಗಿಡಗಳಿಂದ ಕಂಗೊಳಿಸುತ್ತಿದೆ.

ಗಿಡ ಮರಗಳಿಂದ ನಾನಾ ಜಾತಿಯ ಪಕ್ಷಿ ಸಂಕುಲ ಇಲ್ಲಿ ನೆಲಸಿವೆ, ಇವುಗಳ ಇಂಚರ ಸದಾ ಕೇಳಿಸುತ್ತದೆ.
ಕುಡಿಯಲು ನೀರು ಒಂದಿಷ್ಟು ಕಾಳು ಚೆಲ್ಲಿ ಅಲ್ಲಿಗೆ ಬರುವ ಪಕ್ಷಿಗಳ ಪೋಟೋ ತೆಗೆಯಲು ವ್ಯವಸ್ಥೆ ಮಾಡಿದ್ದಾರೆ.
ಹೀಗೆ ಕಳೆದ ಮೂರು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲೀ ತಮ್ಮ ಜೀವನದ ಸಂತಸದ ಕ್ಷಣ ತಮ್ಮದಾಗಿದೆ. ಇಲ್ಲಿ ಬೆಳೆತಯುವ ಯಾವುದೇ ಫಲ ತಮ್ಮಗಲ್ಲದೆ ಪಕ್ಷಿ ಸಂಕುಲಕ್ಕೆ ಎಂದೇ ಮೀಸಲಿರಿಸಿದೆ. ಮಿನಿ ಪಕ್ಷಿಧಾಂದಂತೆ ಇರುವ ಈ ಪರಿಸರ ತಮಗೆ ಎಲ್ಲಿಲ್ಲದ ಸಂಸತ ತಂದಿದೆ ಎನ್ನುತ್ತಾರೆ ಪಂಪಯ್ಯ ಸ್ವಾಮಿ.

ನಾನಾ ಕಾರಣಗಳಿಗೆಗಿಡ ಮರಗಳನ್ನು ಕಡಿಯುವವರ ಮದ್ಯ ಯಾರ ಸಹಾಯವೂ ಇಲ್ಲದೇ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ನಡೆಸಿರುವ ಪರಿಸರದ ಇವರ ಕಾಳಜಿ ಇತರರಿಗೆ ಮಾದರಿಯಾಗಿದೆ.