ಪ್ಲಾಸ್ಟಿಕ್ ಬಳಕೆ ನಿಲ್ಲಿಸೋಣ ಪರಿಸರವನ್ನು ರಕ್ಷಿಸೋಣ

489

ಬಳ್ಳಾರಿ /ಬಳ್ಳಾರಿ : ಪ್ಲಾಸ್ಟಿಕ್ ಬಳಕೆ ನಿಲ್ಲಿಸೋಣ ಪರಿಸರವನ್ನು ರಕ್ಷಿಸೋಣ : ಡಾ. ಅರವಿಂದ್ ಪಟೇಲ್ ಹೇಳಿಕೆಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಗೊತ್ತಿದ್ದರೂ ನಾವು ಜಾಗೃತರಾಗದಿದ್ದರೆ ಮುಂದೆ ಇದರಿಂದ ಇನ್ನೂ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿ, ವೈದ್ಯ ಡಾ. ಅರವಿಂದ್ ಪಟೇಲ್ ಹೇಳಿದರು.ಅವರು ಬಳ್ಳಾರಿ ಜಿಲ್ಲೆ ಬಳ್ಳಾರಿಯ ಗಾಂಧಿನಗರದ ಮದರ್ ತೆರೇಸಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಿಸರ ಕಾಳಜಿ ಕುರಿತು ಮಾತನಾಡಿದರು.ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ಹಾನಿಯಾಗುತ್ತಿದೆ. ಅದನ್ನು ಸುಡವುದರಿಂದ ಡಯಾಕ್ಸಿನ್ ಎಂಬ ಅತ್ಯಂತ ವಿಷಕಾರಿ ರಾಸಾಯನಿಕ ಬಿಡುಗಡೆಯಾಗಿ ಮನುಷ್ಯನಿಗೆ ಅಸ್ತಮಾ ಕ್ಯಾನ್ಸರ್ ಅಂತಹ ಭೀಕರ ಖಾಯಿಲೆ ತರುತ್ತದೆ. ಅಲ್ಲದೆ ಪ್ಲಾಸ್ಟಿಕ್ ಸುಡುವುದರಿಂದ ಓಝೋನ್ ಪದರು ಹಾಳಾಗಿ ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೈಮೇಲೆ ಬಿದ್ದು ಚರ್ಮದ ಕ್ಯಾನ್ಸರ್ ಬರುತ್ತದೆ ಆದ್ದರಿಂದ ಯಾರೇ ಪ್ಲಾಸ್ಟಿಕ್ ಸುಟ್ಟರೆ ಅದನ್ನು ತಡೆಯಬೇಕು ಮತ್ತು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕಾಗಿದೆ ಎಂದರು.ದಿನನಿತ್ಯದ ಬದುಕಿನಲ್ಲಿ ಮಾರುಕಟ್ಟೆಗೆ ಹೋಗುವ ನಾವು ಮನೆಯಿಂದಲೇ ಕೈಚೀಲಗಳನ್ನು ಒಯ್ಯುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದ ಅರವಿಂದ್ ಪಟೇಲ್ ಗಣೇಶ ಚತುರ್ಥಿಯಲ್ಲಿ ಮಣ್ಣಿನ ಗಣೇಶನ ಪ್ರತಿಷ್ಠಾಪನೆ ಮಾಡುವ ಮೂಲಕ ಜಲಮಾಲಿನ್ಯವನ್ನು ತಡೆಗಟ್ಟಬೇಕಿದೆ ಎಂದರು.ದೀಪಗಳ ಹಬ್ಬ ದೀಪಾವಳಿ ಆದರೆ ಆ ಹಬ್ಬದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಒಡೆದು ವಾಯು ಮಾಲಿನ್ಯ ಉಂಟು ಮಾಡುತ್ತೇವೆ. ಪಟಾಕಿಯಲ್ಲಿರುವ ಮರ್ಕ್ಯುರಿ ಮತ್ತು ಲೆಡ್ ಅಂಶಗಳು ನೀರಿನಲ್ಲಿ ಸೇರಿ, ಆ ನೀರು ನಮ್ಮ ದೇಹ ಸೇರಿದರೆ ನಮ್ಮ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ನಮ್ಮ ಹಬ್ಬಗಳನ್ನು ಪರಿಸರ ಸ್ನೇಹಿ ಹಬ್ಬಗಳನ್ನಾಗಿ ಪರಿವರ್ತಿಸಬೇಕಾದ ಅನಿವಾರ್ಯತೆ ಇದೆ ಎಂದರು.ಬಣ್ಣದ ಹಬ್ಬ ಹೋಳಿಯಲ್ಲೂ ಕೂಡ ಪರಿಸರ ಸ್ನೇಹಿ ಬಣ್ಣಗಳನ್ನೇ ಬಳಸಬೇಕು ಎಂದು ಸಲಹೆಯನ್ನಿತ್ತರು.ಮತ್ತೋರ್ವ ಉಪನ್ಯಾಸಕರಾದ ಡಯಟ್ ಕಾಲೇಜೀನ ಅಧ್ಯಾಪಕ ಪನಮೇಶುಲು ಮಾತನಾಡಿ ; ಮನುಷ್ಯನ ನಾಗರೀಕತೆ ವಿಕಸನವಾದಂತೆ ಜೀವ ವೈವಿಧ್ಯ ವಿನಾಶದಂಚಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮೊದಲು ಜೇನ್ನೊಣಗಳಿಂದ ಕಾಡು ಹಾಗೂ ಕೃಷಿಕರ ಬೆಳೆಗಳಿಗೆ ಸಹಜವಾಗಿ ಪರಾಗಸ್ಪರ್ಶ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇಂದು ಪರಾಗ ಸ್ಪರ್ಶದಂತಹ ಸಹಜ ಕ್ರಿಯೆಗಳನ್ನು ಕೂಡ ಕೃತಕವಾಗಿ ಮಾಡುವಂತಹ ಸ್ಥಿತಿ ಬಂದಿದೆ ಎಂದರು.ಪರಿಸರ – ಕಾಡು ಎಂಬುದೇನಾದರೂ ಉಳಿದಿದ್ದರೆ ಅದು ಪ್ರಾಣಿ ಪಕ್ಷಿಗಳಿಂದಲೇ ಹೊರತು ಮನುಷ್ಯರಿಂದಲ್ಲ. ಆದರೆ ನಾವು ನೀವು ಪರಿಸರ ರಕ್ಷಣೆ ಮಾಡುವ ದಿನಗಳು ಈಗ ಬಂದಿವೆ ಎಂದರು.ಮದರ್ ತೆರೇಸಾ ಶಾಲೆಯ ಅಧ್ಯಕ್ಷ ಪಿ ರುದ್ರಯ್ಯ ಮತ್ತು ಶಾಲಾ ಸಿಬ್ಬಂದಿ ಹಾಜರಿದ್ದರು.