ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆ ಮಾಡಿ

308

ಚಿಕ್ಕಬಳ್ಳಾಪುರ/ಗುಡಿಬಂಡೆ:ದಿನೆದಿನೇ‌ ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಹಾಗೂಉತ್ತಮ ಮಳೆಯಾಗಲು ಪ್ರತಿಯೊಬ್ಬರು ಕನಿಷ್ಟ ಟ ೧೦ ಸಸಿಯನ್ನಾದರೂ ನೆಟ್ಟು ಪೋಷಣೆ ಮಾಡ ಬೇಕೆಂದು ಶಾಸಕ ಎಸ್ಎನ್.ಸುಬ್ಬಾರೆಡ್ಡಿ ಕರೆ ನೀಡಿದರು. ಪಟ್ಟಣದ ತಾಲ್ಲೂಕು ಕಛೇರಿ  ಆವರಣದಲ್ಲಿ ಕೃಷಿ ಇಲಾಖೆ, ತಾಲ್ಲೂಕು ಪಂಚಾಯತಿ ಹಾಗೂ ಕೃಷಿಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿಮಾಹಿತಿ ಆಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ,ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದಅವರು ಗಡಿಭಾಗದಲ್ಲಿರುವ ಈ ಭಾಗ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಸಸಿಗಳನ್ನು ನೆಟ್ಟು ಪರಿಸರ ಸಮತೋಲನಕಾಪಾಡಿದಾಗ ಕಾಲಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬೆಳೆಯಬಹುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳ ಬಳಿ, ಮನೆಗಳ ಹತ್ತಿರ ಸಸಿಗಳನ್ನು ನೆಡುವ ಮೂಲಕ ಈ ಭಾಗವನ್ನು ನಿತ್ಯ ಹರಿದ್ವರ್ಣಮಾಡಬಹುದಾಗಿದೆ ಎಂದರು.ನಂತರ ಮಾತನಾಡಿದ ಪ.ಪಂ ಅಧ್ಯಕ್ಷ ಚಂದ್ರಶೇಖರ ನಾಯ್ಡು ರೈತರು ತಮ್ಮ ಭೂಮಿಯಲ್ಲಿ ಯಾವ ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂಬುದನ್ನು ಅರಿತು ಬೆಳೆಯನ್ನಿಡಿ. ರಾಸಾಯನಿಕ ಗೊಬ್ಬರಗಳನ್ನು ಬಳಸುವ ಬದಲು ಸಾವಯವ ಗೊಬ್ಬರಗಳನ್ನು ಬಳಸಿ ಎಂದರು.ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಸಹಾಯಕ ಕೃಷಿ ನಿರ್ದೇಶಕಿ ಅನೀಸ್ ಸಲ್ಮಾ ರೈತರುಕೇವಲ ಒಂದೇ ಬೆಳೆಯನ್ನು ಬೆಳೆಯದೇ ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ಮೊದಲಾದ ಕೃಷಿ ಸಂಬಂಧಿತಕೆಲಸಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.ಇದೇ ವೇಳೆ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ,ಪಶು ಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಕೃಷಿ ಪರಿಕರಗಳ ಮಾರಾಟ ಮಳಿಗೆಗಳನ್ನು ತೆರೆದು ರೈತರಿಗೆ ಅರಿವು ಮೂಡಿಸಲಾಗಿದೆ. ಪಾರಂಪರಿಕ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ನೋಡುಗರಗಮನ ಸೆಳೆಯಿತು.ಈ ವೇಳೆ ಜಿ.ಪಂ. ಸದಸ್ಯೆ ವರಲಕ್ಷ್ಮೀ ಎವಿಟಿ ನಾರಾಯಣಸ್ವಾಮಿ, ತಾ.ಪಂ. ಅಧ್ಯಕ್ಷೆ ವರಲಕ್ಷ್ಮೀಕೃಷ್ಣೇಗೌಡ, ತಹಸೀಲ್ದಾರ್ ಜೆ.ನಂಜಪ್ಪ, ಇ.ಒ. ರವಿಕುಮಾರ್, ಪ.ಪಂ. ಅಧ್ಯಕ್ಷ ಜಿ.ಎಸ್.ಚಂದ್ರಶೇಖರ ನಾಯ್ಡು, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಸಬ್‌ಇನ್ಸಪೆಕ್ಟರ್ಪಾಪಣ್ಣ, ಜಿಲ್ಲಾ ಜಾಗೃತಿ ಸಮಿತಿಯ ಉನ್ನತಿ ವಿಶ್ವನಾಥ್, ವಾಹಿನಿ ಸಂಸ್ಥೆಯ.ಕೃಷಿ ಇಲಾಖೆಯಾಧಿಕಾರಿ ಎನ್.ಶಂಕರಯ್ಯ, ವೀರಕುಮಾರ್,ನಾಗಭೂಷಣ್ ಸೇರಿದಂತೆ ಹಲವರು ಇದ್ದರು.