ಕುಡಿಯುವ ನೀರಿಗೆ ಹಾಹಾಕಾರ

216

ಬಳ್ಳಾರಿ /ಹೊಸಪೇಟೆ : ತುಂಗಭದ್ರಾ ಜಲಾಶಯದಲ್ಲಿ ನೀರು ಪಾತಾಳ ಸೇರಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸಾವಿರಾರು ಜಾನುವಾರುಗಳು, ಪ್ರತಿನಿತ್ಯ ಆಹಾರ-ನೀರಿಗಾಗಿ ಅರಿಸಿಕೊಂಡು ಅಲೆದಾಡುತ್ತಿರುವ ಪರಿಸ್ಥಿತಿ ಉಂಟಾಗಿದ್ದು, ಸದಾ ಹಸಿರು ಮತ್ತು ನೀರಿನಿಂದ ಕಂಗೊಳಿಸುತ್ತಿದ್ದ  ಪ್ರದೇಶದಲ್ಲಿಗ ಬರಗಾಲದ ದಿಗ್ಧರ್ಶನ ನೀಡಿದಂತಾಗಿದೆ. ಜಲಾಶಯದ ನೀರು ಕ್ಷೀಣವಾಗುತ್ತಿದಂತಯೇ, ಇತ್ತ ಜಾನುವಾರುಗಳು, ಜಲಾಶಯದ ಹಿನ್ನಿರಿನ ಪ್ರದೇಶದಲ್ಲಿ ಅರೆ-ಬರೆ ಚಿಗುರೊಡೆದ ಮೇವು ಇತರೆ, ಹಸಿರು ಸೇವನೆ ಮಾಡಿ ಮನೆಗೆ ಕಡೆ ದಾರಿ ಹಿಡಿಯುವುದು ಪ್ರತಿವರ್ಷದ ವಾಡಿಕೆಯಾಗಿತ್ತು. ಆದರೆ ಈ ಬಾರಿ ಈ ಪ್ರದೇಶದಲ್ಲೀಗ ಹಸಿರು ಮಾಯವಾಗಿದ್ದು, ಜಾನುವಾರುಗಳು ಆಹಾರ-ನೀರಿಲ್ಲದೇ ಮೂಕ ವೇದನೆ ಅನುಭವಿಸುವಂತಾಗಿದೆ. ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೇ ಜಲಾಶಯದಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಮಟ್ಟದಲ್ಲಿ ಸಂಗ್ರಹವಾಗಿದೆ. ಅಲ್ಪ-ಸ್ವಲ್ಪವಾದರೂ ದನ-ಕರುಗಳಿಗೆ ಆಹಾರ ನೀರು ಒಸಗಿಸುತ್ತಿದ್ದ ಹಿನ್ನೀರಿನ ಪ್ರದೇಶ ಪ್ರಸ್ತುತ ಭರಡು ಭೂಮಿಯಂತಾಗಿದೆ. ಮರಿಯಮ್ಮನಹಳ್ಳಿ ಹೋಬಳಿ ಗ್ರಾಮಗಳ ಹಲವು ಗ್ರಾಮಗಳಿಂದ ದನ-ಕರುಗಳು ಒಂದೇ ಪ್ರದೇಶದಲ್ಲಿ ಸಿಗುತ್ತಿದ್ದ ಮೇವು ಹಾಗೂ ನೀರಿಗಾಗಿ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ದಾವಿಸಿ ಬರುತ್ತಿದ್ದವು. ಜಲಾಶಯ ಹಿನ್ನೀರಿನ ಪ್ರದೇಶ ಪೂರ್ಣ ಒಣಗಿ ಹೋಗಿದ್ದು, ಬಣಗುಡುತ್ತಿದೆ. ಈಗಾಗಲೇ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಆಹಾರ-ನೀರಿನ ಸಮಸ್ಯೆ ಉಂಟಾಗಿದ್ದು, ರೈತಾಪಿವರ್ಗ ಆತಂಕದಲ್ಲಿದೆ. ತುಂಗಭದ್ರಾ ಜಲಾಶಯದ ನೀರಿನ್ನೆ ನೆಚ್ಚಿಕೊಂಡ ರೈತರ ಬದುಕು ಶೋಚನೀಯ ಸ್ಥಿತಿ ತಲುಪಿದೆ.