ಶಾಲಾ ಮಕ್ಕಳಿಗೆ ಕೊಠಡಿಯ ಕೊರತೆ

816

ಚಿಕ್ಕಬಳ್ಳಾಪುರ/ಚಿಂತಾಮಣಿ:– ತಾಲ್ಲೂಕಿನ ಚಿನ್ನಸಂದ್ರ ಗ್ರಾಮ. ಒಂದು ಶಾಲೆ 150 ಕ್ಕೂ ಹೆಚ್ಚು ಮಕ್ಕಳು. ಕೊಠಡಿ ಮಾತ್ರ ಕೇವಲ 3 . ಶಿಕ್ಷಣಾಧಿಕಾರಿಗಳೇ ಸ್ವಲ್ಪ ಇತ್ತ ಗಮನಹರಿಸಿ :ಇದು ಬಡ ಮಕ್ಕಳ ಶಾಲೆ. ಇತ್ತಿಚಿನ ದಿನಗಳಲ್ಲಿ ಹಾಜರಾತಿ ಮತ್ತು ಅಗತ್ಯ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿತ್ತಿದ್ದು ಇರುವ ಶಾಲೆಗಳಿಗೆ ಕನಿಷ್ಠ ಸೌಲಭ್ಯವನ್ನು ನೀಡದೆ ಶಿಕ್ಷಣ ಇಲಾಖೆ ಕೇವಲ 3 ಕೊಠಡಿಗಳಲ್ಲಿ 150 ಕ್ಕೂ ಹೆಚ್ಚು ಮಂದಿ ಮಕ್ಕಳು ಪಾಠ-ಪ್ರವಚಗಳನ್ನು ಕೇಳಬೇಕಾಗಿರುವ ದುಸ್ಥಿತಿ ಸರ್ಕಾರಿ ಶಾಲೆಯೊಂದರಲ್ಲಿ ಕಂಡುಬಂದಿದೆ. ತಾಲ್ಲೂಕಿನ ಚಿನ್ನಸಂದ್ರ ಸರ್ಕಾರಿ ಶಾಲೆಯಲ್ಲಿ 1ರಿಂದ 7 ತರಗತಿಯವರೆಗೂ ಸರಿ ಸುಮಾರು 150 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದು ಶಾಲೆಗೆ ಇರುವ 5 ಕೊಠಡಿಗಳ ಪೈಕಿ1 ಕೊಠಡಿ ಮುಖ್ಯ ಶಿಕ್ಷಕ ಮತ್ತು ಸಿಬ್ಬಂದಿಗಳಿಗೆ 1 ಕೊಠಡಿ ಮಕ್ಕಳಿಗೆ ಬಿಸಿಯೂಟ ಮಾಡುವ ಅಡುಗೆ ಕೊಠಡಿಗೆ ಮೀಸಲಿದ್ದರೆ ಇನ್ನುಳಿದ 3 ಕೊಠಡಿಗಳಲ್ಲಿ 100 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಒಬ್ಬರ ಮೇಲೆ ಮತ್ತೊಬ್ಬರು ಕುಳಿತು ಇಕ್ಕಟ್ಟಿನಲ್ಲಿ ಪಾಠಗಳನ್ನು ಆಲಿಸುವ ದುಸ್ಥಿತಿ ಒಂದೆಡೆಯಾದರೆ ಉಳಿದ ಮಕ್ಕಳನ್ನು ಹಳೆಯ ಗ್ರಾಮ ಪಂಚಾಯತಿ ಮತ್ತು ಮಸೀದಿ ಯವರು ನೀಡಿರುವ ಸಣ್ಣ ಮನೆಯಲ್ಲಿ ವಿದ್ಯಾಭ್ಯಾಸ ಮಾಡಿಸಬೇಕಾದ ಪರಿಸ್ಥಿತಿ ಯಲ್ಲಿರುವುದು ದುರಾದುಷ್ಟಕರವಾಗಿದೆ.ಗ್ರಾಮಸ್ಥರ ಆಕ್ರೋಶ :- ಕೂಲಿ ನಾಲಿ ಮಾಡಿಕೊಂಡು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಪೋಷಕರು ಶಾಲೆಗೆ ಕಳುಹಿಸುತ್ತಾರೆ ಆದರೆ ಪಾಠ ಮಾಡುವ ಕೊಠಡಿಯಲ್ಲೇ ಮಕ್ಕಳಿಗೆ ಬಿಸಿಯೂಟ ತಯಾರು ಮಾಡುವ ಕೊಠಡಿಯಿದ್ದು ಏನಾದರೂ ಆಗಬಾರದ ಅನಾಹುತವಾದರೆ ಯಾರು ಹೊಣೆ ? ಕ್ಷೇತ್ರ ಶಿಕ್ಷಣಾಧಿಕಾರಿಗಳು.ಸಿ.ಆರ್.ಪಿ.ಸೇರಿದಂತೆ ಅಧಿಕಾರಿಗಳು ಸಾಕಷ್ಟು ಬಾರಿ ಶಾಲೆಗೆ ಬೇಟಿ ನೀಡಿದ್ದು ಮಕ್ಕಳ ಈ ದುಸ್ಥಿತಿಯ ಬಗ್ಗೆ ಕಣ್ಣಾರೆ ನೋಡಿದ್ದರೂ ಮಕ್ಕಳ ಹಿತ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಆಕ್ರೋಯ ವ್ಯಕ್ತಪಡಿಸಿದ್ದಾರೆ.ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ :- ಗ್ರಾಮದ ಸರ್ಕಾರಿ ಶಾಲೆಯ ಅವ್ಯವಸ್ಥೆ ಬಗ್ಗೆ ಸುಮಾರು 3 ವರ್ಷಗಳಿಂದ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಅನೇಕ ಬಾರಿ ಮೌಖಿಕ ಹಾಗೂ ಪತ್ರ ಮುಖೇನ ಹೆಚ್ಚುವರಿ ಶಾಲಾ ಕೊಠಡಿಗಳನ್ನು ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ, ಮನವಿ ಪತ್ರಗಳನ್ನು ನೀಡಿದ್ದರು ನಮಗೂ ಅದಕ್ಕೂ ಸಂಬಂದವಿಲ್ಲದಂತೆ ವರ್ತಿಸುತ್ತಾ ಕಾಲ ಕಳೆಯುತ್ತಿದ್ದಾರೆಂದು ಪೋಷಕರು ಮತ್ತು ಗ್ರಾಮದ ಮುಖಂಡರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಶಾಲೆಯತ್ತ ಧಾವಿಸಿ ಮಕ್ಕಳಿಗೆ ಅವರ ಪರಿಸ್ಥಿತಿ ಅರಿತು ಶಾಲೆಗೆ ಬೇಕಾದ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಕಾರ್ಯನಿರ್ವಹಿಸುತ್ತಾರೋ ಇಲ್ಲವೂ ಕಾದು ನೋಡಬೇಕಾಗಿದೆ.