ವರುಣನ ಕೃಪೆ, ಗರಿಗೆದರಿದ ಕೃಷಿ ಚಟುವಟಿಕೆ

301

ಬಳ್ಳಾರಿ /ಹೊಸಪೇಟೆ :ಈ ಭಾರಿ ಬೇಸಿಗೆ ಆರಂಭದಿಂದಲೂ ಸುಡ ಬಿಸಿಲಿನ ತಾಪ ತಾಳಲಾರದೇ ಬಸವಳಿದು ಹೋಗಿದ್ದ ಜನರಿಗೆ ಮಳೆರಾಯ, ತಂಪನೇಯ ಅನುಭೂತಿ ನೀಡಿದ್ದಾನೆ.ವರುಣನ ಆಗಮನದಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭೂಮಿ ಹಸಿಯಾಗುತ್ತಿಂದಯೇ ರೈತರು, ತಮ್ಮ ಹೊಲ-ಗದ್ದೆಗಳನ್ನು ಹಸನ ಮಾಡಿಕೊಳ್ಳಲು ಮುಂದಾಗಿದ್ದು, ನಸುಕಿನಲ್ಲಿಯೇ ಎದ್ದು, ತಲೆ ಮೇಲೆ ಬುತ್ತಿಗಂಟು, ಕೈಯಲ್ಲಿ ಕುಡಗೋಲು ಹಿಡಿದು, ಹೊಲ-ಗದ್ಧೆಗಳ ಕಡೆಗೆ ಮುಖ ಮಾಡಿದರು. ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತ ಮಹಿಳೆ ಮತ್ತು ಕಾರ್ಮಿಕರು, ದನ-ಕರುಗಳೊಂದಿಗೆ ಪಾದಯಾತ್ರೆ ಹಾಗೂ ಎತ್ತಿನ ಗಾಡಿಗಳ ಮೂಲಕ ಸಾಗುತ್ತಿದ್ದ ದೃಶ್ಯ ಬುಧವಾರ ಕಂಡು ಬಂದಿತು.ಮಳೆ-ಬೆಳೆಯಿಲ್ಲದೇ ಕಂಗಲಾಗಿ ಮುಗಿಲು ಕಡೆ ಮುಖ ಮಾಡಿದ್ದ ರೈತಾಪಿವರ್ಗ, ನಾನಾ ದೇವರ ಮೊರೆ ಹೋಗಿದ್ದರು. ಇವರ ಮೊರೆ, ದೇವರಿಗೆ ಕೇಳಿಸಿದಂತಾಗಿ ಮಂಗಳವಾರ ಸಂಜೆ ಸುರಿದ ಮಳೆ, ರೈತರಲ್ಲಿ ನವ ಚೈತನ್ಯವನ್ನು ತಂದು ಕೊಟ್ಟಿದೆ.ಮಳೆಯಿಲ್ಲದೇ ಹೊಲ-ಗದ್ದೆಗಳಲ್ಲಿ ಕೆಲಸ-ಕಾರ್ಯವಿಲ್ಲದೇ, ಗ್ರಾಮದ ದೇವಸ್ಥಾನ, ಛಾವಡಿ. ಸಮುದಾಯ ಭವನ ಇತರೆ ಕಡೆಗಳಲ್ಲಿ ಕಾಲಹರಣ ಮಾಡುತ್ತಿದ್ದ ರೈತರು, ಕೃಷಿ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ.ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲದ ಕಾರಣ ಬೇಸಿಗೆ ಬೆಳೆಗೆ ನೀರು ಇಲ್ಲದಂತಾಗಿ, ಕಮಲಾಪುರ ಕೆರೆಯೂ ಭತ್ತಿಹೋಗಿದೆ. ಆದರೂ, ಬೇರೆ ದಾರಿ ಕಾಣದೇ ಜಲಾಶಯದಿಂದ ನೀರು ಸಿಗಬಹುದು ಎನ್ನುವ ನಂಬಿಕೆಯಿಂದ ಕೆಲ ರೈತರು, ದೈರ್ಯ ಮಾಡಿ, ಭತ್ತ, ಬಾಳೆ ಹಾಗೂ ಕಬ್ಬನ್ನು ನಾಟಿ ಮಾಡಿದ್ದರು. ನೀರು ಸಿಗದಂತಾಗಿ, ನಾಟಿ ಮಾಡಿದ ಬೆಳೆಲ್ಲವೂ ಒಣಗಿ, ರೈತರು ಸಂಕಷ್ಠಗೀಡಾಗಿದರು.ಕೆರೆಯ ಹೂಳು:ಸತತ ಬರಗಾಲದಿಂದ ತತ್ತರಗೊಂಡಿದ್ದ ಕಮಲಾಪರು ಹೋಬಳಿ ಭಾಗದ ರೈತರು, ತುಂಗಭದ್ರಾ ಜಲಾಶಯ ಪಕ್ಕದಲ್ಲಿದ್ದರೂ ನೀರಿಗಾ ಪರದಾಡು ಪರಿಸ್ಥಿತಿಯಿಂದ ಹೊರ ಬರಲು, ಗ್ರಾಮದ ಐತಿಹಾಸಿಕ ಕಮಲಾಪುರ ಕೆರೆಯ ನೀರು ಖಾಲಿಗುತ್ತಿಂದಯೇ ಹೂಳೆತ್ತಲು ಸಂಕಲ್ಪ ಮಾಡಿದರು. ಈ ಮೂಲಕ ಕೆರೆ ನೀರಿ ಸಂಗ್ರಹ ಸಾಮಾರ್ಥ್ಯವನ್ನು ಹೆಚ್ಚಿಸಲು ತೀರ್ಮಾನಿಸಿ, ತಮ್ಮ ಟ್ರ್ಯಾಕ್ಟರ್‌ಗಳ ಮೂಲಕ ಅಪಾರ ಪ್ರಮಾಣದ ಹೂಳನ್ನು ಎತ್ತಿ ಸಾಗಿಸಿ, ತಮ್ಮ ಹೊಲ-ಗದ್ಧೆಗಳಿಗೆ ಹಾಕಿಕೊಂಡು ಕೆರೆಯಲ್ಲಿ ಅಪಾರ ಪ್ರಮಾಣದ ಹೂಳನ್ನು ಖಾಲಿ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಆಧಿಕ ನೀರು ಸಂಗ್ರಹವಾಗುವ ಸಾಧ್ಯತೆಯಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.