ವಿವಿಧ ಕ್ಷೇತ್ರಗಳ ಸಾಧಕರಿಗೆ ಗಾಯತ್ರಿ ಪುರಸ್ಕಾರ

380

 ಚಿಕ್ಕಬಳ್ಳಾಪುರ/ಗುಡಿಬಂಡೆ: ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ನಡೆಯುತ್ತಿರುವ 29 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಆರ್.ಕೆ.ಪದ್ಮನಾಭ, ಸೋಮಶೇಖರ್, ಸದಾಶಿವ ಶರ್ಮ, ವೇಣುಗೋಪಾಲ ಗುರೂಜಿ, ರಾಮಮೂರ್ತಿರಾವ್, ಅನಂತ ಪದ್ಮಾನಭ, ಪ್ರೊ.ಕೆ.ಆರ್.ನರಸಿಂಹನ್, ಗುಡಿಬಂಡೆ ನದಸ್ವರ ಹನುಮಂತಪ್ಪ, ಮೊದಲಾದವರನ್ನು ಸನ್ಮಾನಿಸಲಾಯಿತು. ಈ ವೇಳೆ ಪ.ಪಂ. ಅಧ್ಯಕ್ಷ ಚಂದ್ರಶೇಖರನಾಯ್ಡು, ಸದಸ್ಯರಾದ ದ್ವಾರಕಿನಾಥ ನಾಯ್ಡು, ರಾಜಣ್ಣ, ರಿಯಾಜ್, ರಮೇಶ್, ಕೋಚಿಮುಲ್ ಅಶ್ವಥರೆಡ್ಡಿ, ಎಸ್.ನರಸಿಮಮೂರ್ತಿ, ಸ.ನ.ನಾಗೇಂದ್ರ, ವಾಹಿನಿ ಸುರೇಶ್, ರಾಜಗೋಪಾಲ್, ನಿರಂಜನ್ ಮೊದಲಾದವರು ಇದ್ದರು.