ಗ್ರಾಮೀಣ ಸೊಗಡಿಗೆ ಉತ್ತೇಜನ ನೀಡಿ

271

ರಾಯಚೂರು: ದಕ್ಷಿಣ ಭಾರತದ ಜಂಬೂ ಸವಾರಿ ಎಂದೇ ಪ್ರಖ್ಯಾತಿ ಹೊಂದಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಅರ್ಥಪೂರ್ಣ ಆಚರಣೆ ಮುಖೇನ ಗ್ರಾಮೀಣ ಸೊಗಡಿಗೆ ಉತ್ತೇಜನೆ ನೀಡುವ ಮುನ್ನೂರುಕಾಪು ಬಲಿಜ ಸಮಾಜ ಮಾನವೀಯ ಕಾರ್ಯ ಶ್ಲಾಘನೀಯವೆಂದು  ಮಹರ್ಷಿ ಶ್ರೀ ಆನಂದ ಗುರೂಜಿ ಆಶೀರ್ವಚನ ನೀಡಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮುನ್ನೂರುಕಾಪು ಬಲಿಜ ಸಮಾಜ ವತಿಯಿಂದ ಹಮ್ಮಿಕೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಎರಡನೇ ದಿನದ ಅಂತರರಾಜ್ಯ ಕಲ್ಲು ಎಳೆವ ಎತ್ತುಗಳ ಸ್ಪರ್ಧೆ ಉಧ್ಘಾಟಿಸಿ ಮಾತನಾಡಿದರು.

ಸಮಾಜದ ಮುಖಂಡರೆಲ್ಲಾ ಸೇರಿ ಕಲ್ಲು ಎಳೆವ ಗ್ರಾಮೀಣ ಕಲೆಯನ್ನು ಎತ್ತಿ ತೋರುವ ಮೂಲಕ ಸಂಪ್ರದಾಯಬಧ್ದ ಆಚರಣೆಗೆ ಪಣತೊಟ್ಟಿರುವುದು ಸ್ವಾಗತಾರ್ಹ.

ಹಿಂದೂ ಸನಾತನ ಧರ್ಮದಲ್ಲಿ ಧರ್ಮ ರಕ್ಷಿತೇ ರಕ್ಷಿತಹಾ ಎನ್ನುವಂತೆ ಎತ್ತುಗಳಲ್ಲಿ ಇರುವ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ಮುನ್ನೂರುಕಾಪು ಬಲಿಜ ಸಮಾಜ ಇತರೆ ಸಮುದಾಯಗಳಿಗೆ ಮಾದರೀಯಾಗಿದೆ.ಕಾಯಕಯೋಗಿ ರೈತರ ಬೆಳೆಗೆ ಆನೆಬಲ ಪ್ರತೀರೂಪವಾಗಿರುವ ಸಾಂಪ್ರದಾಯಿಕ ಹಬ್ಬವನ್ನು ಅಧ್ದೂರಿ ಆಚರಣೆಯೊಂದಿಗೆ ಎತ್ತುಗಳ ಸಂರಕ್ಷಿಸಲಾಗುತ್ತಿದೆ.

ಸಮುದಾಯಕ್ಕೆ ಮಾಜೀ ಶಾಸಕ ಎ,ಪಾಪಾರೆಡ್ಡಿ ಜನಪರ ಕಾಯಕ ಶ್ಲಾಘನೀಯವಾಗಿದ್ದು,ದೇಶದ ಬೆನ್ನೆಲುಬಾಗಿರುವ ರೈತ ಭಾಂದವರಿಗೆ ಪ್ರಸಕ್ತ ಮುಂಗಾರು ಸಮೃಧ್ದಿ ನೀಡಲೆಂದು ಆಶಯ ವ್ಯಕ್ತಪಡಿಸಿದರು.  ಶರಣಪ್ಪಗೌಡ ಜಾಡಲದಿನ್ನಿ, ನಗರಾಧ್ಯಕ್ಷ ದೊಡ್ಡ ಮಲ್ಲೇಶಪ್ಪ,

ಮಾಜೀ ಶಾಸಕ, ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ರುವಾರಿ ಎ, ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪೋಗಲ್ ಚಂದ್ರಶೇಖರ ರೆಡ್ಡಿ, ಎನ್, ಶ್ರೀನಿವಾಸರೆಡ್ಡಿ, ಮಂಡಲ ಪ್ರಧಾನ , ಕ್ರೀಡಾಧ್ಯಕ್ಷ ಪುಂಡ್ಲಾ ನರಸರೆಡ್ಡಿ, ಬೆಲ್ಲಂ ನರಸರೆಡ್ಡಿ, ಬಾಯಿಕಾಡ ಶೇಖರ ರೆಡ್ಡಿ, ಶೇಖರ ರೆಡ್ಡಿ, ಗುಡ್ಸಿ ನರಸರೆಡ್ಡಿ, ಮುಖಂಡರಾದ ಆರ್,ತಿಮ್ಮಯ್ಯ, ಕೆ,ಶಾಂತಪ್ಪ, ಜನಾರ್ಧನರೆಡ್ಡಿ, ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.