ಪೇಪರ್ ಲೆಸ್ ಪ್ರೆಸ್ ಟ್ರಸ್ಟ್.

344

ಶಿವಮೊಗ್ಗ :ಪ್ರೆಸ್ ಟ್ರಸ್ಟ್ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆಯಾಗಿದೆ. ಇನ್ನ್ಮುಂದೆ ಸುದ್ದಿಗಳು ಕಾಗದ ರಹಿತವಾಗಿ ಅಂದರೆ ಇಮೇಲ್,ವಾಟ್ಸಪ್ ಮೂಲಕ ಸುದ್ದಿಗಳು ಸುದ್ದಿಮನೆ ತಲುಪಲಿವೆ. ಕಾಗದ ರಹಿತ ವ್ಯವಸ್ಥೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ನಗರದ ಹಿರಿಯ ಪತ್ರಕರ್ತರಿಗೆ ಪ್ರೆಸ್ ಟ್ರಸ್ಟ್ ಮೊದಲ ಕಂತಿನಲ್ಲಿ ಜಾರಿಗೊಳಿಸಿರುವ ಅಪಘಾತ ವಿಮಾ ಪಾಲಿಸಿ ವಿತರಿಸಿದರು.

ಈ ವೇಳೆ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಅಧ್ಯತೆ ವಹಿಸಿದ್ದರು.