ಕಾರಹುಣ್ಣಿಮೆ,ಗಿರಕಿ ಬಂಡಿ ಕ್ರೀಡೆ ಆಚರಣೆ.

460

ರಾಯಚೂರು:ಕಾರಹುಣ್ಣಿಮೆ ಹಬ್ಬದ ಸಡಗರ, ಗ್ರಾಮದಲ್ಲಿ ಹಬ್ಬದ ವಾತವರಣ, ಮದುವಣ ಗಿತ್ತಿಯಂತೆ ತಯಾರಾದ ಎತ್ತುಗಳು, ಗ್ರಾಮೀಣ ಕ್ರೀಡೆಯ ಸೊಬಗು ಏನಪ್ಪಾ ಇದು ಅಂತಿರಾ.

ಹೌದು ಹೈದ್ರಾಬಾದ್ ಕರ್ನಾಟಕದಲ್ಲಿ ಕಾರುಹುಣ್ಣಿಮೆ ಎಂದರೆ ರೈತರ ಹಬ್ಬವೆಂದೆ ಕರೆಯುವ ಪ್ರತೀತಿ. ಕಾರುಹುಣ್ಣಿಯ ವಿಶೇಷ ಎಂದರೆ ರೈತನ ಜೀವನಾಡಿ ಕೃಷಿ ಚಟುವಟಿಕೆಯ ವಾಹನ ಎಂದೇ ಬಿಂಬಿಸಲ್ಪಡುವ ಎತ್ತುಗಳನ್ನ ಪೂಜಿಸಿ ಆಚರಿಸಲ್ಪಡುವ ಹಬ್ಬ. ಇನ್ನು ರಾಯಚೂರಿನ ಜಾಲಿ ಬೇಂಚಿ ಗ್ರಾಮದಲ್ಲಿ ಈ ಒಂದು ಹಬ್ಬದ ವಾತವರಣ ಕಂಡು ಬಂದಿದ್ದು. ಕಾರು ಹುಣ್ಣಿಮೆ ನಿಮಿತ್ಯ ವಿಶೇಷ ಗ್ರಾಮೀಣ ಕ್ರೀಡೆಯನ್ನ ಆಚರಿಸಿದರು.
ಎರಡು ಬಂಡಿಗಳನ್ನ ಜೋಡಿಸಿ ಅವುಗಳ ಚಕ್ರ ತಿರುಗದಂತೆ ಒಂದು ಕಟ್ಟಿಗೆಯನ್ನ ಅಡ್ಡಲಾಗಿ ಇರಿಸಿ ಜೊಡಿ ಎತ್ತುಗಳ ಮೂಲಕ ಎಳೆಸುವ ಸ್ಪರ್ಧೆಯೇ ಗಿರಿಕಿ ಬಂಡಿ ಎಂಬ ಕ್ರೀಡೆ. ಇದು ಉತ್ತರ ಕರ್ನಾಟಕದ ಹಳೆಯ ಕ್ರಿಡೆಯಾಗಿದ್ದು ಹಿಂದೆ ರೈತರಿಗೆ ಹುಮ್ಮಸ್ಸು ತುಂಬುವಂತ ಗ್ರಾಮೀಣ ಕ್ರೀಡೆಯಾಗಿ ಆಚರಿಸಲ್ಪಡುತ್ತಿತ್ತು. ಈ ಕ್ರಿಡೆಗಾಗಿಯೇ ಎತ್ತುಗಳನ್ನು ಮದುವಣಗಿತ್ತಿಯಂತೆ ಶೃಂಗಾರ ಗೊಳೀಸಿ ಗ್ರಾಮದಲ್ಲಿ ಮೆರವಣಿಗೆ ಮಾಡುವುದರ ಮೂಲಕ ಹುಣ್ಣಿಮೆಯ ಮರುದಿನ ಈ ಕ್ರಿಡೆಯನ್ನ ಆಚರಿಸಲಾಗುತ್ತದೆ.

ಪ್ರಸ್ತುತ ದಿನಗಳಲ್ಲಿ ಆಧುನಿಕತೆಗೆ ಮಾರುಹೊದ ಯುವ ಪೀಳಿಗೆ ಈ ಕ್ರೀಡೆಯನ್ನ ಆಯೋಜಿಸಿದ್ದು ಗ್ರಾಮದ ಎಲ್ಲಾ ಯುವಕರು ಸೇರಿ ಈ ಕ್ರೀಡೆಯಲ್ಲಿ ಬಾಗವಹಿಸಿದ್ದು ವಿಶೇಷವಾಗಿತ್ತು. ಇಡೀ ಗ್ರಾಮಸ್ಥರು ಒಂದೆಡೆ ಸೇರಿ ಹಬ್ಬವನ್ನು ಆಚರಿಸಿದರು. ಇನ್ನು ಈ ಕ್ರೀಡೆಯಲ್ಲಿ ಗ್ರಾಮದ 10 ಜೋಡಿ ಎತ್ತುಗಳು ಭಾಗವಹಿಸಿದ್ದವು. 20 ನಿಮಿಷದಲ್ಲಿ ಹಚ್ಚು ದೂರು ಎಳೆದ ಜೋಡಿ ಎತ್ತುಗಳಿಗೆ ಮತ್ತು ರೈತರಿಗೆ ಉತ್ಸಾಹ ತುಂಬಲು ಬಹುಮಾನವಾಗಿ 10 ತೊಲೆ ಬೆಳ್ಳಿ ಖಡಗ ನೀಡಿದರು. ಹಬ್ಬದ ಮೂಲಕ ಮುಂಗಾರನ್ನು ಸ್ವಾಗತಿಸಿ ರೈತರು ತಮ್ಮ ಹೊಲ ಹದ ಮಾಡಲು ಹೊಲಗಳಿಗೆ ತೆರಳಿದರು.

ಇನ್ನು ಕಂಪ್ಯೂಟರ್, ಟಿ.ವಿ, ತಂತ್ರಗ್ನಾನದ ಆಳ್ವಿಕೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶೀಸುತ್ತಿದ್ದು ಇಂತಹ ಕ್ರಿಡೆಗಳನ್ನ ಉಳಿಸಿ ಬೆಳೆಸುವ ಅತ್ಯವಿದೆ. ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ಇನ್ನು ಇಂತಹ ಗ್ರಾಮೀಣ ಕ್ರೀಡೆಗಳು ಚಾಲ್ತಿಯಲ್ಲಿರುವುದು ಖುಷಿಯ ವಿಚಾರ. ಒಟ್ಟಾರೆ ಕಾರು ಹುಣ್ಣಿಮೆ ಮೂಲಕ ರೈತರು ವೀಜ್ರಂಬಣೆಯಿಂದ ಮುಂಗಾರನ್ನು ಸ್ವಾಗತಿಸಿದರು.