ದುಡಿಮೆ ಸಾಕು ಶಿಕ್ಷಣ ಬೇಕು.

207

ರಾಯಚೂರು: ಬಾಲಕಾರ್ಮಿಕತೆಯನ್ನು ತೊಲಗಿಸಲು ಮಕ್ಕಳನ್ನು ಹಾಸ್ಟಲ್ ಗಳಲ್ಲಿ ಸೇರಿಸಿ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಗಾಧಿ ಗೌತಮ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಾಲಕಾರ್ಮಿಕ ದಿನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು ೪ ಸಾವಿರಕ್ಕಿಂತ ಅಧಿಕ ಬಾಲ ಕಾರ್ಮಿಕರಿದ್ದಾರೆ ಅವರನ್ನು ಅದೇ ಗ್ರಾಮದಲ್ಲಿ ಶಾಲೆಗೆ ಸೇರಿಸಿದ್ದರಿಂದ ಮತ್ತೆ ಕೆಲಸಗಳಲ್ಲಿ ತೊಡಗುತ್ತಿದ್ದಾರೆ ಬಾಲ ಕಾರ್ಮಿಕತೆಯಿಂದ ಮುಕ್ತಗೊಳಿಸಲು ರಕ್ಷಣೆ ಮಾಡುವುದರ ಜೊತೆಗೆ ಮಕ್ಕಳ ಶಿಕ್ಷಣದಿಂದ ವಂಚಿತರಾಗದಂತೆ ಹಾಸ್ಟಲ್ಗಳಲ್ಲಿ ಸೇರಿಸಿ ಉಚಿತವಾಗಿ ಊಟ.ವಸತಿಯೊಂದಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುದು ಎಂದರು.

ಜಿಲ್ಲೆಯ ಕಾರ್ಖಾನೆ, ಗ್ಯಾರೇಜ್, ಮತ್ತು ಹೊಲಗಳ ಕೆಲಸದಲ್ಲಿ ತೊಡಗಿರುವ ಬಾಲಕಾರ್ಮಿಕ ಮಕ್ಕಳ ರಕ್ಷಣೆ ಮಾಡಲು ಅಧಿಕಾರಿಗಳು ಕಾರ್ಯಚರಣೆಯಲ್ಲಿ ತೊಡಗಿದ್ದು ಮಕ್ಕಳನ್ನು ಕರೆದೊಯ್ದ ಮಾಲಿಕರ ವಿರುದ್ದ ಪ್ರಕರಣ ದಾಕಲಿಸಿ ೫೦ ಸಾವಿರ ದಂಡ ಮತ್ತು ೨ ವರ್ಷ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ಚಟುವಟಿಕೆಯಲ್ಲಿ ತೊಡಗಿಸಲು ಮಕ್ಕಳನ್ನು ವಾಹನಗಳಲ್ಲಿ ಸಾಗಾಣೆ ಮಾಡುವ ವಾಹನ ಮಾಲಿಕ ಮತ್ತು ಹೊಲದ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.

ಪಾಲಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಶಿಕ್ಷವನ್ನು ಒದಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಮಂಜುನಾಥ,ಕ್ಷೇತ್ರ ಶಿಕ್ಷಣಾಧಿಕಾರಿ ,ಕಾರ್ಮಿಕ ಅಧಿಕಾರಿ ಆರತಿ,
ಮಂಜುನಾಥರೆಡ್ಡಿ, ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.