ಗುತ್ತಿಗೆ ಪೌರ ಕಾರ್ಮಿಕರ ವತಿಯಿಂದ ಖಾಯಂಗೊಳಿಸುವಂತೆ ಆಗ್ರಹ.

378

ಮಂಡ್ಯ/ಮಳವಳ್ಳಿ : ಕನಾ೯ಟಕ ರಾಜ್ಯ ಗುತ್ತಿಗೆ ಪೌರ ಕಾರ್ಮಿಕ ರ ಸಂಘವತಿಯಿಂದ ಖಾಯಂಗೊಳಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಪ್ರತಿಭಟನಾ ಧರಣಿ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.ಸಕಾ೯ರ ವಿರುದ್ದ ಘೋಷಣೆ ಕೂಗಿದರು. ನಂತರ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜು ಮಾತನಾಡಿ. ಕಳೆದ 15 ವರ್ಷಗಳಿಂದ ಪೌರ ಕಾರ್ಮಿಕ ರಾಗಿ ಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಚುನಾವಣೆ ಸಂದಭ೯ದಲ್ಲಿ ಖಾಯಂ ಗೊಳಿಸುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಖಾಯಂಗೊಳಿಸಲಿಲ್ಲ, ಈ ಕೂಡಲೇ ಖಾಯಂ ಗೊಳಿಸಬೇಕು ಎಂದು ಒತ್ತಾಯಿಸಿದರು. ನಿರಂತರವಾಗಿ ಮತ್ತಷ್ಟು ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು. ಪ್ರತಿಭಟನೆ ಯಲ್ಲಿ ಕಾರ್ಯದರ್ಶಿ ಮಾದೇಶ, ಮೋಹನ್. ಸೇರಿದಂತೆ ಮತ್ತಿತ್ತರರು ಇದ್ದರು.