ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ.

360

ಮಂಡ್ಯ /ಮಳವಳ್ಳಿ :ದುಷ್ಕರ್ಮಿಗಳು ಗುಂಪೊಂದು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸುಲ್ತಾನ್ ರಸ್ತೆಯಲ್ಲಿರುವ ಗಂಗಾಧರ ಎಂಬುವವರಿಗೆ ಸೇರಿದ ಸಮುದಾಯ ಭವನದ ಬಳಿ ನಡೆದಿದೆ. ಪಟ್ಟಣದ ಫಣೀಶ್(೨೦) ಎಂಬ ಯುವಕ ಕೊಲೆಯಾದ ದುರ್ದೈವಿಯಾಗಿದ್ದು , ಈತ ತನ್ನ ಸ್ನೇಹಿತನೊಂದಿಗೆ ವಾಯು ವಿಹಾರ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಫಣೀಶ್ ಮತ್ತು ಆತನ ಸ್ನೇಹಿತ ಮೇಲೆ ಹಲ್ಲೆ ನಡೆಸಿ ಫಣೀಶ್ ನನ್ನು ಕೊಲೆಗೈದು ಪರಾರಿಯಾಗಿದೆ. ಕೊಲೆಯಾದ ಯುವಕನ ಜೊತೆಯಲ್ಲಿದ್ದ ಗೀರೀಶ್ ಹೇಳುವಂತೆ ಈ ಕೊಲೆ ಮಾಡಿದ್ದು ಮಳವಳ್ಳಿ ಪಟ್ಟಣದ ಶಿವು ಮತ್ತು ಆತನ ಸಹಚರರು ಕೃತ್ಯ ನಡೆಸಿರೋದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಅಲ್ಲದೆ ಹಳೇ ವೈಷಮ್ಯವೇ ಫಣೀಶ್ ಕೊಲೆಗೆ ಕಾರಣವೆಂದು ಹೇಳಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಅಡಿಷನಲ್ ಎಸ್ಪಿ ಸವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು‌. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಬೇಟಿ ಪರಿಶೀಲನೆ ನಡೆಸಿದರು ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.