ನ್ಯಾಯಕ್ಕಾಗಿ ಮೋದಿಗೆ ಪತ್ರ..

257

ಬಾಗಲಕೋಟೆ: ಶಿಷ್ಯವೇತನ ಕೊಡಿಸುವುದಾಗಿ ನಂಬಿಸಿ ಜವಾನನೊಬ್ಬ ತನ್ನ ಸಹಚರರೊಂದಿಗೆ ಹೈಸ್ಕೂಲ್ ಬಾಲಕಿ ಸಾಮೂಹಿಕ ಅತ್ಯಾಚಾರ ಎಸಗಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ತನ್ನ ಮೇಲೆ ನಡೆದಿದ್ದ ಕ್ರೌರ್ಯದ ಬಗ್ಗೆ ಬೇಸತ್ತ ಬಾಲಕಿಯೋರ್ವಳು ಪ್ರಧಾನಿ ಮೋದಿಗೆ ಅವರಿಗೆ ಪತ್ರದ ಮೂಲಕ ನ್ಯಾಯ ಕೊಡಿಸುವಂತೆ ಘಟನೆಯ ಕ್ರೂರತೆಯನ್ನ ವಿವರಿಸಿದ್ದಾಳೆ.

ತನ್ನ ಮೇಲೆ ನಡೆದಿದ್ದ ಅತ್ಯಾಚಾರದಿಂದ ಬೇಸತ್ತ ಬಾಲಕಿ ನ್ಯಾಯ ಕೊಡಿಸುವಂತೆ ಕೋರಿ ಪ್ರಧಾನಿ ಮೋದಿಗೆ ಅವರಿಗೆ ಪತ್ರ ಬರೆದಿದ್ದಾಳೆ. ಜಿಲ್ಲೆಯ ಶಿರೂರು ಗ್ರಾಮದ ಸಿದ್ದೇಶ್ವರ ಫ್ರೌಢ ಶಾಲೆಯ ದಲಿತ ಬಾಲಕಿ ನ್ಯಾಯಕ್ಕಾಗಿ ಪ್ರಧಾನಿ ಮೊರೆ ಹೋದವಳು.
ಪತ್ರದಲ್ಲಿ ಕಾಮುಕರ ಅಟ್ಟಹಾಸ ವಿವರಿಸಿದ ಬಾಲಕಿ
ವಿದ್ಯಾರ್ಥಿ ವೇತನದ ಹಣ ಕೂಡಿಸುವುದಾಗಿ ನಂಬಿಸಿ, ಶಾಲೆಯ ಸಿಬ್ಬಂದಿ ವಿಜಯಕುಮಾರ ಕಾಳವ್ವಗೋಳ ಸೇರಿದಂತೆ ಇತರ ಮೂವರು ತನ್ನನ್ನು ಕಾರಿನಲ್ಲಿ ಕರೆದೊಯ್ದು ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ನೀಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರರೆಂದು ಆರೋಪಿಸಿದ್ದಾಳೆ.

ತೀವ್ರ ಜ್ವರದಿಂದ ಬಳಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ ಸಂದರ್ಭದಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಇದರಿಂದ ಬೆಚ್ಚಿಬಿದ್ದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದಾರೆ. ಈ ಘಟನೆಯಿಂದ ನೊಂದಿರುವ ಬಾಲಕಿ ಅತ್ಯಾಚಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ಮೊರೆ ಹೋಗಿದ್ದಾಳೆ.
ಶಾಲೆಯಲ್ಲಿ ವಿಜಯಕುಮಾರನಿಂದ ಸಾಕಷ್ಟು ಬಾಲಕಿಯರು ಈ ರೀತಿಯ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಪತ್ರದಲ್ಲಿ ಬಾಲಕಿ ಬರೆದಿದ್ದಾಳೆ. ಪತ್ರದ ಪ್ರತಿಯನ್ನು, ಎಸ್‌ಪಿ, ಡಿಸಿ, ಜಿಲ್ಲಾ ಪಂಚಾಯತ್‌ ಸಿಇಒ ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಿದ ಬಾಲಕಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾಳೆ.